ದೇಶಾದ್ಯಂತ 244 ಸ್ಥಳಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಸಲು ಕೇಂದ್ರ ಸರ್ಕಾದ ಆದೇಶ..!!

ಭಾರತ ಪಾಕ್ ನಡುವೆ ಯುದ್ಧಭೀತಿ ಜೊತೆಯಲ್ಲೇ ನಾಳೆ (ಮೇ 7) ದೇಶಾದ್ಯಂತ 244 ಸ್ಥಳಗಳಲ್ಲಿ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಈ ಆದೇಶದಲ್ಲಿ, ನಾಗರಿಕರ ರಕ್ಷಣೆಯ ಸಂಬಂಧ ಮೇ 7 ರಂದು ದೇಶಾದ್ಯಂತ 244 ಸ್ಥಳಗಳಲ್ಲಿ ಅಣಕು ಪ್ರದರ್ಶನ ಮಾಡಿಸಬೇಕು. ಎಲ್ಲಾ ರಾಜ್ಯಗಳಲ್ಲಿಯೂ ವಾಯು ದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ. ಅದರಂತೆ ಬುಧವಾರ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಸಲು ಸೂಚಿಸಲಾಗಿದೆ.

ಕ್ಷಿಪಣಿ ದಾಳಿ ಅಥವಾ ವಾಯುಧಲಿಗಳಂತಹ ಯುದ್ಧಗಳ ಸಂದರ್ಭದಲ್ಲಿ ನಾಗರಿಕರು ಎಷ್ಟು ಬೇಗನೆ ಮತ್ತು ಎಷ್ಟು ಪರಿಣಾಮಕಾರಿಯಾಗಿ ಪ್ರತಿಕ್ರಿಸಬಹುದು ಎಂಬುದನ್ನು ಪರೀಕ್ಷಿಸುವುದೇ ಈ ಅಣಕು ಡ್ರಿಲ್ ನ ಪ್ರಮುಖ ಉದ್ದೇಶವಾಗಿದೆ.

ಮೇ 7, 2025 ರಂದು, ಅಧಿಕೃತವಾಗಿ ಗೊತ್ತುಪಡಿಸಿದ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಟ್ಟದ ನಾಗರಿಕ ರಕ್ಷಣಾ ಪೂರ್ವಾಭ್ಯಾಸ ನಡೆಯಲಿದೆ. ಡ್ರಿಲ್ ಅನ್ನು ಆಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ಸ್ಥಳೀಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ವಾರ್ಡನ್ಗಳು, ಗೃಹರಕ್ಷಕರು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ), ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕರು, ನೆಹರು ಯುವ ಕೇಂದ್ರ ಸಂಘಟನೆ (ಎನ್ವೈಕೆಎಸ್) ಸದಸ್ಯರು ಮತ್ತು ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ನಾಳೆ ಭಾರತದಾದ್ಯಂತ 244 ಸ್ಥಳಗಳಲ್ಲಿ ನಡೆಯುವ ಮಾಕ್ ಡ್ರಿಲ್ ಗೆ ಕರ್ನಾಟಕದ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ನಾಳೆ ಸಂಜೆ 4:00ಗೆ ಕರ್ನಾಟಕದ ಬೆಂಗಳೂರು, ಕಾರಾವಾರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಮಾಕ್ ಡ್ರಿಲ್ ನಡೆಸಲು ಉದ್ದೇಶಿಸಲಾಗಿದೆ.

ಯುದ್ಧ ನಡೆಯುವ ಸಂದರ್ಭಗಳಲ್ಲಿ ಯಾವ ರೀತಿ ಸನ್ನಿವೇಶಗಳು ಎದುರಾಗಬಹುದು, ಆ ಸಂದರ್ಭದಲ್ಲಿ ನಾಗರಿಕರು ಏನು ಮಾಡಬೇಕು, ಯಾವ ರೀತಿ ಸುರಕ್ಷಿತ ಸ್ಥಳಗಳನ್ನು ಪತ್ತೆ ಹಚ್ಚಿ ಸ್ಥಳಾಂತರವಾಗಬೇಕು, ರಾತ್ರಿ ವಾಯುದಾಳಿಯ ಸಂದರ್ಭದಲ್ಲಿ ಒಮ್ಮೆಗೆ ಬೆಳಕನ್ನು ಆರಿಸಿದರೆ ಏನಾಗುತ್ತದೆ, ಯುದ್ಧ ಸೈರನ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನೆಲ್ಲಾ ಜನರಿಗೆ ಮನವರಿಕೆ ಮಾಡಲು ಕೇಂದ್ರ ಗೃಹ ಮತ್ತು ರಕ್ಷಣಾ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. ಈ ಮಾಕ್ ಡ್ರಿಲ್ ತಾಲೀಮಿನಲ್ಲಿ ದೇಶದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಲ್ಲಿ ಕೋರಲಾಗಿದೆ.


Post a Comment

0 Comments