ವಿಶ್ವದ ಕೆಲವೇ ದೇಶಗಳಲ್ಲಿ ಇರುವ ತಂತ್ರಜ್ಞಾನವಾಗಿದ್ದು, ಈಗ ಭಾರತದ ಪಾಲಿಗೆ ಈ ಭಾಗ್ಯ ದಕ್ಕಿದೆ.
"ಸ್ಟ್ರ್ಯಾಟ್ರೋಸ್ಫಿಯರಿಕ್ ಏರ್ ಶಿಪ್ ಪ್ಲಾಟ್ಫಾರ್ಮ್" ಎಂಬ ಹೆಸರಿನ ಈ ವಿನೂತನ ಪ್ರಯೋಗವನ್ನು ಮಧ್ಯ ಪ್ರದೇಶದ ಶ್ಯೋಪುರ್ ಪರೀಕ್ಷಾರ್ಥ ಕೇಂದ್ರದಲ್ಲಿ ಡಿಆರ್‌ಡಿಓ ನಡೆಸಿದೆ. ಈ ಏರ್ ಶಿಪ್ಪನ್ನು ಆಗ್ರಾ ಮೂಲದ ವೈಮಾನಿಕ ಸಾಗಾಣಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಮಾನವ ರಹಿತ ನೌಕೆ ಇದಾಗಿದ್ದು, ಭೂಮಿಯಿಂದ ಹದಿನೇಳು ಕಿಲೋಮೀಟರ್ ಎತ್ತರದವರೆಗೆ ವಿವಿಧ ಉಪಕರಣಗಳನ್ನು ಹೊತ್ತು ಹಾರಿದೆ. ಆ ನಂತರ ಭೂಮಿಗೆ ಇಳಿದಿದ್ದು 62 ನಿಮಿಷಗಳ ಹಾರಾಟದ ಸಂದರ್ಭದಲ್ಲಿ ಏರ್ ಶಿಪ್ ನಲ್ಲಿದ್ದ ಸೆನ್ಸರ್ ಅತ್ಯಮೂಲ್ಯ ಅಂಶಗಳನ್ನು ಸಂಗ್ರಹಿಸಿದೆ.
ಸಮೋಷ್ಣ ಏರ್ ಶಿಪ್ ಗಳು ಎತ್ತರದ ಸ್ಥಳದಲ್ಲಿನ ಛಾಯ ಉಪಗ್ರಹಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಭೂಮಿಯಿಂದ 17 ರಿಂದ 22 ಕಿಲೋಮೀಟರ್ ಎತ್ತರದವರೆಗೆ ಈ ಏರ್ ಶಿಪ್ಪನ್ನು ನಿಯೋಜನೆ ಮಾಡಬಹುದಾಗಿದೆ. ಈ ಯಂತ್ರಗಳನ್ನು ಹೀಲಿಯಂ ಅನಿಲವನ್ನು ಬಳಸಿ ಆಕಾಶಕ್ಕೆ ಕಳುಹಿಸಲಾಗುತ್ತದೆ. ಇವು ಸೌರಶಕ್ತಿಯನ್ನು ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತವೆ. ಈ ಯಂತ್ರದಲ್ಲಿ ಇರುವಂತಹ ಬ್ಯಾಟರಿಗಳು ರಾತ್ರಿ ವೇಳೆಯೂ ಕಾರ್ಯನಿರ್ವಹಿಸಲು ನೆರವಾಗುತ್ತವೆ.
ಏರ್ ಶಿಫ್ಟ್ ಗಳು ಉಪಗ್ರಹ ಅಥವಾ ವಿಮಾನಗಳಂತೆ ಅಲ್ಲ, ನಿರ್ದಿಷ್ಟ ಜಾಗದಲ್ಲಿ ಹಲವು ದಿನ ಇದ್ದು ನಿರಂತರ ಸರ್ವೇಕ್ಷಣೆ ಹಾಗೂ ಸಂವಹನ ಸಂಪರ್ಕ ಒದಗಿಸಬಲ್ಲದು. ಗಡಿ ಪ್ರದೇಶಗಳ ಮೇಲೆ ನಿಗಾ ಇಡಲು, ವಿಪತ್ತು ಪ್ರತಿಕ್ರಿಯೆ ಹಾಗೂ ಬೇಹುಗಾರಿಕಾ ಉದ್ದೇಶಗಳಿಗೆ ಈ ಏರ್ ಶಿಪ್ ಗಳು ಭಾರೀ ಉಪಯೋಗವಾಗುತ್ತದೆ. ಡ್ರೋನ್ ಮತ್ತು ಉಪಗ್ರಹಗಳ ಸ್ಥಾನವನ್ನು ಈ ಏರ್ ಶಿಪ್ ತುಂಬುತ್ತದೆ. ಇವುಗಳನ್ನು ಅತ್ಯಂತ ತ್ವರಿತವಾಗಿ ನಿಯೋಜನೆ ಮಾಡಲು ಸಾಧ್ಯವಿದೆ. ಇವುಗಳಿಗೆ ತಗಳುವ ವೆಚ್ಚವು ಕಡಿಮೆಯಾಗಿದ್ದು ಮರುಬಳಕೆ ಕೂಡ ಮಾಡಬಹುದಾಗಿದೆ.
ಭೂಮಿ ಮೇಲಿನ ವಾಯುಮಂಡಲದಲ್ಲಿ ಐದು ಪದರಗಳಿದ್ದು ಅದರಲ್ಲಿ ಎರಡನೆಯ ಪದರವೇ ಸಮೋಷ್ಣವಲಯ ಅಥವಾ ಸ್ಟ್ರಾಟೋಸ್ಫಿರ್. ಈ ಪದರದಲಿ ನಿಂತು ಗಡಿಭಾಗದಲ್ಲಿನ ಚಟುವಟಿಕೆ ವಿಪತ್ತು ಕುರಿತಾದ ಮಾಹಿತಿಗಳನ್ನು ನೀಡುವ ಬಲೂನ್ ರೀತಿಯ ಸಾಧನವನ್ನು ಏರ್ ಶಿಪ್ ಎಂದು ಕರೆಯಲಾಗುತ್ತದೆ. ಇವುಗಳನ್ನು ಹೀಲಿಯಂ ಅನಿಲ ತುಂಬಿ ಉಡವಣೆ ಮಾಡಲಾಗುತ್ತದೆ ಬಳಿಕ ನಮಗೆ ಬೇಕೆಂದಾಗ ಕೆಳಗಡೆ ಇಳಿಸಿಕೊಳ್ಳಬಹುದಾಗಿದೆ.
ದೇಶದ ಗಡಿ ಭಾಗಗಳ ಮೇಲೆ ಕಣ್ಣಿಡಲು ಉಪಗ್ರಹ, ವಿಮಾನಗಳ ವ್ಯವಸ್ಥೆ ಇದೆ. ಆದರೆ ಅವುಗಳಿಗಿಂತ ವಿಭಿನ್ನವಾಗಿರುವ ಏರ್ ಶಿಪ್ ಗಳು ನಿರ್ದಿಷ್ಟ ಸ್ಥಳದಲ್ಲಿ ಹಲವು ದಿನ ಅಥವಾ ವಾರಗಳ ಕಾಲ ನೆಲೆ ನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ. ಇವುಗಳು ನಿರಂತರ ಮಾಹಿತಿ ಒದಗಿಸಬಲ್ಲವುಗಳಾಗಿದ್ದು, ಡ್ರೋನ್ ಹಾಗೂ ಉಪಗ್ರಹಗಳ ನಡುವೆ ಕೊರತೆಯನ್ನು ನೀಗಿಸ ಬಲ್ಲದು.
0 Comments