ನೌಕರರ ರಾಜ್ಯ ವಿಮಾ ನಿಗಮ (ESIC) ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ ಮತ್ತು ಕಿರಿಯ ವಿಭಾಗ ಒಟ್ಟು 550 ಹುದ್ದೆಗಳು) ಹುದ್ದೆಗಳ ನೇಮಕಾತಿ ನಡೆಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಮೇತವಾಗಿ ಏಪ್ರಿಲ್ 26 ನೇ ತಾರೀಖಿನೊಳಗೆ ಅರ್ಜಿ ಸಲ್ಲಿಸಬೇಕು. ಕೆಲವು ರಾಜ್ಯಗಳಿಗೆ ಮೇ 2 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಸಿದರೆ ಇನ್ನಷ್ಟು ಉತ್ತಮ.
ಈ ಮೇಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಕೊನೆ ದಿನ ಮೇ 26ಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು 45 ವರ್ಷ ಮೀರಿರಬಾರದು. ಅಲ್ಲದೇ ಇಎಸ್ಐ ಉದ್ಯೋಗಿಗಳು ಮತ್ತು ಸರ್ಕಾರಿ ನೌಕರರಿಗೆ 5 ವರ್ಷಗಳವರೆಗೆ ವಯಸ್ಸಿನಲ್ಲಿ ಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ರಿಸರ್ವ್ (ಎಸ್ಸಿ/ಎಸ್ಟಿ/ಒಬಿಸಿ) ಹುದ್ದೆಗಳನ್ನು ಮೀಸಲಿಟ್ಟಿದ್ದರೆ ಮಾತ್ರ ವಯೋಮಿತಿ ಸಡಿಲಿಕೆ ಅರ್ಹರಾಗುತ್ತಾರೆ.
ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 78,800 ರೂಪಾಯಿ ಆರಂಭಿಕ ವೇತನ ಸಿಗಲಿದೆ. ಜೊತೆಗೆ ಸರ್ಕಾರಿ ಭತ್ಯೆ ಸೇರಿದಂತೆ ಇತರ ಸೌಲಭ್ಯಗಳೂ ಸಿಗಲಿವೆ. ಇನ್ನು ಸ್ಪೆಷಲಿಸ್ಟ್ ಗ್ರೇಡ್-II (ಕಿರಿಯ) ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ 67,700 ರೂಪಾಯಿ ಆರಂಭಿಕ ವೇತನ ನೀಡಲಾಗುತ್ತದೆ. ಇದರೊಂದಿಗೆ ಸರ್ಕಾರದಿಂದ ಸಿಗುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಎನ್‌ಪಿಎ ಹಾಗೂ ಸಾರಿಗೆ ಭತ್ಯೆ ಸೇರಿದಂತೆ ಹೆಚ್ಚುವರಿ ಪ್ರಯೋಜನ ಸಿಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅಂದರೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿಯನ್ನು ಅಧಿಕೃತ ದಿನಾಂಕದ ಒಳಗೆ ಆಯಾ ಪ್ರಾದೇಶಿಕ ಕಚೇರಿಗೆ ಕಳುಹಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನಿಗದಿತ ದಿನಾಂಕದ ನಂತರ ತಡವಾಗಿ ಬಂದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಕಳುಹಿಸುವಾಗಿ ನೀವು ಲಕೋಟೆಯ ಮೇಲೆ ಸ್ಪಷ್ಟವಾಗಿ ಪ್ರದೇಶಕ್ಕೆ ತಜ್ಞ Gr.-II (ಜೂನಿಯರ್/ಸೀನಿಯರ್ ಸ್ಕೇಲ್) ಹುದ್ದೆಗೆ ಅರ್ಜಿ, ಅರ್ಜಿ ಸಲ್ಲಿಸಿದ ವಿಶೇಷತೆ: ಎಂದು ಬರೆದಿರಬೇಕು.
ಅರ್ಜಿ ಶುಲ್ಕವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ನಿಗದಿಪಡಿಸಲಾಗಿದೆ. ಮಹಿಳೆಯರು, ಎಸ್‌ಸಿ/ಎಸ್‌ಟಿ PwBD (ಬೆಂಚ್‌ಮಾರ್ಕ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು), ಮಾಜಿ ಸೈನಿಕರು ಹಾಗೂ ಇಎಸ್‌ಐಸಿ ಉದ್ಯೋಗಿಗಳು ಸೇರಿ ಕೆಲವರಿಗೆ ಶುಲ್ಕ ವಿನಾಯಿತಿ ಕೊಡಲಾಗಿದೆ. ಹೆಚ್ಚಿನ ಮಾಹಿತಿಗೆ https://www.esic.gov.in/recruitments ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
0 Comments