ಬಿಇಎಲ್.ಇಡಿ(D.El.Ed) ಪರೀಕ್ಷೆ ಅರ್ಜಿ ಸಲ್ಲಿಕೆಗೆ ಎಪ್ರಿಲ್ 21 ಕೊನೆಯ ದಿನ..!!

ಪ್ರಥಮ ಮತ್ತು ದ್ವಿತೀಯ ಡಿಇಎಲ್.ಇಡಿ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊಸ ಹಾಗೂ ಪುನರಾವರ್ತಿತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು, ಸಂಸ್ಥೆ ಮುಖ್ಯಸ್ಥರು ಅರ್ಥ ಅಭ್ಯರ್ಥಿಗಳ ವಿವರಗಳನ್ನು ಅರ್ಜಿ ನಮೂನೆಯಲ್ಲಿ kseab.karnataka.gov.in ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವಂತೆ ತಿಳಿಸಲಾಗಿದೆ. 
ಹೊಸ ಅಭ್ಯರ್ಥಿಗಳಿಗೆ ಪ್ರಥಮ ಡಿಇಎಲ್.ಇಡಿ ಪರೀಕ್ಷೆಗೆ 1245 ಹಾಗೂ ದ್ವಿತೀಯ ವರ್ಷಕ್ಕೆ 1290 ರೂಪಾಯಿ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ. ಪುನರಾವರ್ತಿತ ಅಭ್ಯರ್ಥಿಗಳು ಒಂದು ವಿಷಯಕ್ಕೆ 330, ಎರಡು ವಿಷಯಗಳಿಗೆ 660 ಹಾಗೂ ಮೂರು ಅಥವಾ ಮೇಲ್ಪಟ್ಟ ವಿಷಯಗಳಿಗೆ 1190 ರೂಪಾಯಿ ಪಾವತಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್ 21 ಕೊನೆಯ ದಿನವಾಗಿದೆ. ಸ್ಟೇ ಅಲ್ಲದೆ ದಿನಕ್ಕೆ ಹೆಚ್ಚುವರಿ 150 ರೂಪಾಯಿ ದಂಡ ಶುಲ್ಕದೊಂದಿಗೆ ಏಪ್ರಿಲ್ 24ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ದ್ವಿತೀಯ ವರ್ಷಕ್ಕೆ ಒಂದು ಐಚ್ಚಿಕ ವಿಷಯ ಆಯ್ಕೆಗೆ ಅವಕಾಶವಿದ್ದು, ತಪ್ಪಾಗಿ ಆಯ್ಕೆ ಮಾಡಿದ್ದಲ್ಲಿ ಬದಲಾವಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Post a Comment

0 Comments