ಪ್ರತಿಭಾವಂತ ಕ್ರೀಡಾಪಟುಗಳಿಗೆ ಮೀಸಲಾತಿ ನೀಡುವ ಉದ್ದೇಶದಿಂದ ಕಳೆದ ಫೆಬ್ರವರಿ 11ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು. ಇದರಲ್ಲಿ ಶೇಕಡ ಎರಡಕ್ಕೆ ಮೀರದಂತೆ ಮೀಸಲು ನೀಡತಕ್ಕದ್ದು ಎಂದು ಉಲ್ಲೇಖಿಸಲಾಗಿತ್ತು. ಆದರೆ ಇದೀಗ ಈ ಮೀಸಲಾತಿಯನ್ನು ಶೇಕಡ 3ಕ್ಕೆ ಮೀರದಂತೆ ಎಂದು ತಿದ್ದುಪಡಿ ತರಲಾಗಿದೆ.
ಹಾಗೆಯೇ ಈ ಪೊಲೀಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿಯಲ್ಲಿಯೂ ಹೆಚ್ಚಳ ಮಾಡಲಾಗಿದೆ. ಸಾಮಾನ್ಯವಾಗಿ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 38 ವರ್ಷ ಎಂದು ತಿಳಿಸಲಾಗಿದೆ. ಒಬಿಸಿ ವರ್ಗದವರಿಗೆ 40 ವರ್ಷ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಕ್ರೀಡಾಪಟುಗಳಿಗೆ 45 ವರ್ಷ ಎಂದು ನಿಗದಿ ಮಾಡಲಾಗಿದೆ. ಇದಲ್ಲದೆ ಸಾಧನೆಗೆ ನೀಡಲಾಗುವ ವೈಟೇಜ್ ಅಂಕಗಳ ಪ್ರಮಾಣ 55ಕ್ಕಿಂತ ಹೆಚ್ಚಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
0 Comments