ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಮೇ 5 ರಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಲಿಂಕ್ ಮೂಲಕ ಅಭ್ಯರ್ಥಿಗಳು ತಮಗೆ ಅನುಕೂಲವಾದ ದಿನ ಹಾಗೂ ಸಮಯ ನಿಗದಿ ಮಾಡಿಕೊಳ್ಳಬಹುದು. ಒಂದು ದಿನಕ್ಕೆ ಒಂದು ಸಾವಿರ ಅಭ್ಯರ್ಥಿಗಳು ದಾಖಲೆ ಪರಿಶೀಲಿಸಿಕೊಳ್ಳಲು ಅವಕಾಶ ಇರಲಿದೆ. ವಿವಿಧ ಮೀಸಲಾತಿ ಕೋರಿ ಅಂದಾಜು 10,000 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಇಎ ಮಾಹಿತಿ ನೀಡಿದೆ. ಕ್ಲೇಮ್ ಗೆ ಅನುಗುಣವಾಗಿ ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೋರ್ಟಲ್ ಲಿಂಕ್ https://bit.ly/3YHR3iT.
0 Comments