ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 8ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಕ್ಕನುಗುಣವಾಗಿ ಆಯಾ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಐಟಿಐ/ಡಿಪ್ಲೋಮಾ/ಬಿಎಸ್ಸಿ/ಬಿಇ/ಬಿಟೆಕ್/ಎಂಸಿಎ/ಎಂಎಸ್ಸಿ/ಎಂಎಸ್ ಡಬ್ಲ್ಯೂ/ಕಾನೂನು ಪದವಿ/ಎಂಬಿಎ/ಸಿಎ/ಐಸಿಎಮ್ಎ ಪದವಿ ಪಡೆದಿರಬೇಕು. ಕಾರ್ಯಾನುಭವವು ಅಪೇಕ್ಷಣೀಯ.
ಅರ್ಜಿ ಸಲ್ಲಿಸಲು ಬಯಸಿರುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 50 ವರ್ಷದೊಳಗಿರಬೇಕು. ಸರಕಾರದ ನಿಯಮಾನುಸಾರ ಸಾಮಾನ್ಯ/ಹಿಂದುಳಿದ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಅನ್ವಯವಾಗಲಿದೆ.
ಅಭ್ಯರ್ಥಿಗಳ ಅನುಭವ ಹಾಗೂ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ವಾರ್ಷಿಕ ಶೇಕಡಾ 5 ಹೆಚ್ಚಳದೊಂದಿಗೆ 40,000-ರೂ. 1,70,000 ವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ವಿಭಾಗವಾರು ಪ್ರಮುಖ ಹುದ್ದೆಗಳ ವಿವರ:
ಸ್ಟೀಲ್ ಮೆಲ್ಟಿಂಗ್ ಶಾಪ್: 62
ಲೈಮ್ ಡೆಲೊಮೈಟ್ ಕಾಲ್ಸಿನೇಶನ್ ಪ್ಲಾಂಟ್: 20
ಟಿಎಸ್ಸಿ+ಎಚ್ ಎಸ್ ಎಂ: 66
ಡಿಸ್ಪಾಚ್:4
ಆಕ್ಸಿಜನ್ ಪ್ಲಾಂಟ್: 3
ಸೆಂಟ್ರಲ್ ರಿಸರ್ಚ್ ಕಂಟ್ರೋಲ್ ಲ್ಯಾಬ್: 108
ಸ್ಕ್ರಾಪ್ ಅಂಡ್ ಸಾಲ್ವೆಜ್ ವಿಭಾಗ:14
ರಾ ಮೆಟೀರಿಯಲ್ ಡಿವಿಜನ್: 25
ಕಂಪ್ಯೂಟರ್ ಅಂಡ್ ಇಂಫಾರ್ಮೇಷನ್ ಟೆಕ್ನಾಲಜಿ:11
ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ಹೀಗಿದ್ದು, ಸ್ವೀಕೃತ ಅರ್ಜಿಗಳನ್ನು ಆಧರಿಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನದ ಸ್ಥಳದ ಆಯ್ಕೆಯನ್ನು ಅರ್ಜಿಯಲ್ಲಿ ನಿಗದಿಗೊಳಿಸಲಾಗಿದೆ.ಈ ನಿಟ್ಟಿನಲ್ಲಿ ಕರ್ನಾಟಕದ ಹೊಸಪೇಟೆ, ರಾಯ್ಪುರ, ಭುವನೇಶ್ವರ, ರೂರ್ಕೆಲ, ಬೊಕಾರೋ, ದುರ್ಗಾಪುರ ಮತ್ತು ಜುರಾಸ್ ಘಡ್ ನಲ್ಲಿ ಸಂದರ್ಶನ ಆಯೋಜಿಸಲಾಗಿದೆ. ಅಭ್ಯರ್ಥಿಗಳು ತಮಗೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸಂದರ್ಶನಕ್ಕೆ ಹಾಜರಾಗುವ ದಿನಾಂಕವನ್ನು ಎನ್.ಎಸ್.ಎಲ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ನೇಮಕಾತಿಯ ಯಾವುದೇ ಹಂತದಲ್ಲಿ ವಿಸ್ತರಿಸುವ ಹಾಗೂ ಮೊಟಕುಗೊಳಿಸುವ ಅಧಿಕಾರವನ್ನು ಸಂಸ್ಥೆಯು ಹೊಂದಿದೆ.
ಅರ್ಹ ಆಸಕ್ತರು NSL website https://nmdcsteel.nmdc.co.in/ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಮೇ 8ರೊಳಗೆ ಅರ್ಜಿ ಸಲ್ಲಿಸಬೇಕು. 500 ರೂಪಾಯಿಗಳ ಅರ್ಜಿ ಶುಲ್ಕವಿದ್ದು, ಎಸ್ಸಿ, ಎಸ್ಟಿ ಅಥವಾ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಅನ್ವಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ nmdcnisp18@gmail.com ಹಾಗೂ ದೂರವಾಣಿ ಸಂಖ್ಯೆ 7044599061 ಸಂಪರ್ಕಿಸಬಹುದಾಗಿದೆ.
ಹುದ್ದೆಗಳ ಭರ್ತಿಗೆ ಹೊರಡಿಸಲಾದ ಅಧಿಸೂಚನೆಗಾಗಿ https://bit.ly/4iAJhyF ಪರೀಕ್ಷಿಸಬಹುದಾಗಿದೆ.
0 Comments