ಅರ್ಹ ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಯಲ್ಲಿ ಬಿಎಸ್ಸಿ ಪದವಿ ಪಡೆಯುವುದರೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಅಗತ್ಯವಾಗಿ ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30 ವರ್ಷದೊಳಗಿನವರಾಗಿರಬೇಕು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 20,000 ರೂಪಾಯಿಗಳ ಮಾಸಿಕ ವೇತನ ನೀಡಲಾಗುತ್ತದೆ. ಸಂದರ್ಶನದಲ್ಲಿ ಭಾಗಿಯಾಗುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಮ್ಹಾನ್ಸ್ ನ ಎನ್.ಬಿ.ಆರ್.ಎಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ "ಎಕ್ಸಾಂ ಹಾಲ್ ಆಂಡ್ ಬೋರ್ಡ್ ರೂಮ್ ನಲ್ಲಿ ಮೇ 6ರಂದು ಬೆಳಿಗ್ಗೆ 10 ಗಂಟೆಗೆ ಹಾಜರಿರಬೇಕು.
ಅಧಿಸೂಚನೆಗಾಗಿ https://bit.ly/42pghFg ಪರಿಶೀಲಿಸಬಹುದಾಗಿದೆ.
0 Comments