ಕರ್ನಾಟಕ ಮತ್ತಷ್ಟು ದುಬಾರಿ: ಮೇ.1ರಿಂದ ಟ್ಯಾಕ್ಸಿ, ಸಣ್ಣ ಗೂಡ್ಸ್, ಎಲೆಕ್ಟ್ರಿಕ್ ಕಾರು ತೆರಿಗೆ ಹೆಚ್ಚಳ

ಭಾರತದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ವಾಹನ ಖರೀದಿ ತುಂಬಾನೇ ದುಬಾರಿಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಬೇರೆ ಬೇರೆ ರೀತಿಯ ತೆರಿಗೆಗಳನ್ನು ಪಾವತಿಸಬೇಕಾಗಿದ್ದು, ಇವುಗಳ ಜೊತೆಯಲ್ಲಿ ಮೇ 1ರಿಂದ ತೆರಿಗೆಗಳು ಮತ್ತಷ್ಟು ಹೆಚ್ಚಾಗುತ್ತಿವೆ. 
ಎಲೆಕ್ಟ್ರಿಕ್ ವಾಹನ, ಟ್ಯಾಕ್ಸಿ, ಸಣ್ಣ ಗೂಡ್ಸ್ ಸೇರಿದಂತೆ ಹಳದಿ ಬೋರ್ಡ್ ವಾಹನ ಖರೀದಿಯು ಕರ್ನಾಟಕದಲ್ಲಿ ಬಲು ದುಬಾರಿಯಾಗುತ್ತಿದೆ. ಮೇ 1ನೇ ತಾರೀಖನಿಂದ ಎಲ್ಲೋ ಬೋರ್ಡ್ ವಾಹನಗಳಿಗೆ ಜೀವಿತಾವಧಿ ತೆರಿಗೆ ಅಥವಾ ಲೈಫ್ ಟೈಮ್ ಟ್ಯಾಕ್ಸ್ ಪಾವತಿಸಬೇಕು. ಈ ಹೊಸ ಆದೇಶವು ನಾಳೆಯಿಂದಲೇ ಜಾರಿಯಾಗುತ್ತಿದ್ದು, ಈ ಸಂಬಂಧ "ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರತೆ(ತಿದ್ದುಪಡಿ) ವಿಧೇಯಕ-2025"ಕ್ಕೆ ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ. 

ಹಳದಿ ಗೋಲ್ಡ್ ವಾಹನ ಖರೀದಿಸುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ತೆರಿಗೆ ಶಾಕ್ ಕೊಟ್ಟಿದೆ. ತೆರಿಗೆ ತಿದ್ದುಪಡಿ ವಿಧೇಯಕ್ಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಹಿನ್ನೆಲೆಯಲ್ಲಿ ನಾಳೆಯಿಂದ ಹೊಸ ತೆರಿಗೆ ನೀತಿ ಜಾರಿಯಾಗುತ್ತಿದೆ. 10 ಲಕ್ಷ ರೂಪಾಯಿ ಒಳಗಿನ ಹಳದಿ ಬೋರ್ಡ್ ವಾಹನ ಖರೀದಿಸುವವರು ಜೀವಿತಾವಧಿ ತೆರಿಗೆ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುವ ವಾಹನಗಳು, ವಾಣಿಜ್ಯ ಬಳಕೆಗಾಗಿ ಉಪಯೋಗಿಸುವ ವಾಹನಗಳು, ಎಲೆಕ್ಟ್ರಿಕ್ ಕಾರುಗಳಿಗೆ ದುಬಾರಿ ತೆರಿಗೆ ಪಾವತಿಸಬೇಕಾಗುತ್ತದೆ.

ಹೊಸ ತೆರಿಗೆ ನೀತಿಯಲ್ಲಿ ಎಲ್ಲವೂ ಬದಲಾಗಿದ್ದು ಈ ಹಿಂದೆ 10 ಲಕ್ಷ ರೂಪಾಯಿವರೆಗಿನ ಹಳದಿ ಬೋರ್ಡ್ ವಾಹನಗಳಿಗೆ ಪ್ರತಿ ಸೀಟಿಗೆ ನೂರು ರೂಪಾಯಿಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿ ಮಾಡಬೇಕಾಗಿತ್ತು. 4 ಸೀಟರ್ ವಾಹನಗಳಿಗೆ 400 ರೂಪಾಯಿಯಂತೆ ತೆರಿಗೆ ಪಾವತಿ ಮಾಡಬೇಕಾಗಿತ್ತು. ಆದರೆ ಪರಿಷ್ಕೃತ ತೆರಿಗೆ ನೀತಿಯಲ್ಲಿ ಈ ನಿಯಮವನ್ನು ಬದಲಾಯಿಸಲಾಗಿದ್ದು, 10 ಲಕ್ಷ ರೂಪಾಯಿ ವರೆಗಿನ ಹಳದಿಬೋರ್ಡ್ ವಾಹನಗಳಿಗೆ ಶೇಕಡ ಐದರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗಿದೆ. ಅಂದರೆ 10 ಲಕ್ಷ ರೂಪಾಯಿವರೆಗಿನ ಯಲ್ಲೋ ಬೋರ್ಡ್ ವಾಹನ ಖರೀದಿಸಿದರೆ 50,000 ಜೀವಿತಾವಧಿ ಟ್ಯಾಕ್ಸ್ ಪಾವತಿಸಬೇಕು. ಇದರ ಪರಿಣಾಮ ರಸ್ತೆ ತೆರಿಗೆ, ಇತರ ಎಲ್ಲಾ ತೆರಿಗೆ, ವಿಮೆ ಸೇರಿ ವಾಹನದ ಆನ್ ರೋಡ್ ಬೆಲೆ ದುಪ್ಪಟ್ಟಾಗಲಿದೆ. 

ಈ ಹಿಂದಿನ ತೆರಿಗೆ ನೀತಿಯಲ್ಲಿ 25 ಲಕ್ಷಕ್ಕತ ಅಧಿಕ ಮೊತ್ತದ ಎಲೆಕ್ಟ್ರಿಕ್ ವಾಣಿಜ್ಯ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಹೊಸ ತೆರಿಗೆ ನೀತಿಯಲ್ಲಿ 25 ಲಕ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 10ರಷ್ಟು ತೆರಿಗೆ ಪಾವತಿ ಮಾಡಲು ಸೂಚಿಸಲಾಗಿದೆ. ಅಂದರೆ ಪರಿಷ್ಕೃತ ತೆರಿಗೆ ವಿಧೇಯಕದಿಂದಾಗಿ ಇನ್ನು ಮುಂದೆ ನೋಂದಣಿ ಯಾಗುವ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಇವಿ ಕ್ಯಾಬ್ ಗಳಿಗೆ ಶೇಕಡ ಹತ್ತರಷ್ಟು ಅಂದರೆ ಎರಡೂವರೆ ಲಕ್ಷ ರೂಪಾಯಿ ತೆರಿಗೆ ವಿಧಿಸಲಾಗುತ್ತದೆ. ಇದು ಜೀವಿತಾವಧಿ ತೆರಿಗೆಯಾಗಿದ್ದು, ಹಳದಿ ಬೋರ್ಡ್ ಹೊಂದಿರುವ ವಾಹನಗಳಿಗೆ ಅನ್ವಯವಾಗಲಿದೆ. ಈ ತಿದ್ದುಪಡಿ ತೆರಿಗೆ ವಿಧೇಯಕದ ಮೂಲಕ ವಾರ್ಷಿಕ 112.5 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸರಕಾರಕ್ಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಹಾಗೆಯೇ ಹೊಸದಾಗಿ ರಸ್ತೆಗೆ ಇಳಿಯುವ 10 ಲಕ್ಷ ರೂಪಾಯಿ ವರೆಗಿನ ಮೌಲ್ಯದ ಬಾಡಿಗೆ ಮೋಟಾರು ವಾಹನ ಅಂದರೆ ಹಳದಿ ನಾಮಫಲಕ ಹೊಂದಿರುವ ಕ್ಯಾಬ್ ಗಳಿಗೆ ಶೇಕಡಾ ಐದರಷ್ಟು ತೆರಿಗೆ ವಿಧಿಸಲಾಗುತ್ತದೆ. ಹಾಗೆಯೇ ನಿರ್ಮಾಣ ವಲಯದ ಉಪಕರಣಗಳನ್ನು ಸಾಗಿಸುವಂತಹ ವಾಹನಗಳಿಗೆ ಜೀವಿತಾವಧಿ ತೆರಿಗೆಯನ್ನು ಶೇಕಡ 6 ರಿಂದ ಶೇಕಡಾ 8 ಕ್ಕೆ ಹೆಚ್ಚಿಸಲಾಗಿದೆ.

Post a Comment

0 Comments