ಕ್ಯಾಲಿಫೋರ್ನಿಯಾದಲ್ಲಿ 2028ರ ಒಲಿಂಪಿಕ್ಸ್ ಕ್ರಿಕೆಟ್ ನಡೆಸಲು ನಿರ್ಧಾರ..!!

ಮುಂಬರುವ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ವೇಳೆ ಟಿ20 ಕ್ರಿಕೆಟ್ ಸ್ಪರ್ಧೆಗಳು ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮೊನಾದಲ್ಲಿ ನಡೆಯಲಿವೆ. ಇದಕ್ಕಾಗಿ ತಾತ್ಕಾಲಿಕ ಕ್ರಿಕೆಟ್ ಮೈದಾನವನ್ನು ನಿರ್ಮಾಣಗೊಳಿಸಲಾಗುವುದು ಎಂದು ಐಸಿಸಿ ಘೋಷಣೆ ಮಾಡಿದೆ. 
1900ರ ಬಳಿಕ ಅಂದರೆ 128 ವರ್ಷಗಳ ನಂತರ ಒಲಿಂಪಿಕ್ಸ್ ಗೆ ಕ್ರಿಕೆಟ್ ಪದಕ ಸ್ಪರ್ಧೆಯಾಗಿ ಮರು ಸೇರ್ಪಡೆಯಾಗಿದೆ. ಒಲಿಂಪಿಕ್ಸ್ ನ ಪ್ರಧಾನವಾಗಿರುವ ಲಾಸ್ ಎಂಜಲೀಸ್ ಇಂದ 48 ಕಿಲೋಮೀಟರ್ ದೂರವಿರುವ ನಗರದಲ್ಲಿ ಕ್ರಿಕೆಟ್ ಸ್ಫರ್ಧೆ ಆಯೋಜನೆಗೊಂಡಿದೆ. "ಫೇರ್ ಫ್ಲೆಕ್ಸ್"ಎಂದೆ ಜನಪ್ರಿಯವಾಗಿರುವ ಫೇರ್ ಗ್ರೌಂಡ್ ನ 500 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗುವುದು. 

ಕಳೆದ ವರ್ಷ ಅಮೆರಿಕದಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ವೇಳೆಯು ನಿಯಾರ್ಕ್ ನಲ್ಲಿ ತಾತ್ಕಾಲಿಕ ಕ್ರಿಕೆಟ್ ಸ್ಟೇಡಿಯಮ್ ಅನ್ನು ನಿರ್ಮಿಸಲಾಗಿತ್ತು. "ಕ್ರಿಕೆಟ್ ಈಗಾಗಲೇ ತುಂಬಾನೇ ಜನಪ್ರಿಯವಾಗಿರುವ ಕ್ರೀಡೆ. ಒಲಂಪಿಕ್ಸ್ ಮೂಲಕ ಅದು ಇನ್ನಷ್ಟು ವೇಗವಾಗಿ ಅದರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲಿದೆ. ಹೊಸ ಪ್ರೇಕ್ಷಕರನ್ನು ಸೆಳೆಯಲು ಟಿ ಟ್ವೆಂಟಿ ಪ್ರಕಾರ ನೆರವಾಗಲಿದೆ" ಎಂದು ಐಸಿಸಿ ಚೇರ್ಮನ್ ಜಯ್ ಷಾ ತಿಳಿಸಿದ್ದಾರೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028 ರ ಜುಲೈ 14ರಿಂದ 30ರವರೆಗೆ ನಡೆಯಲಿದೆ. ಕ್ರಿಕೆಟ್ ನಲ್ಲಿ ಪುರುಷರ, ಮಹಿಳೆಯರ ವಿಭಾಗದಲ್ಲಿ ತಲಾ 6 ತಂಡಗಳು ಸ್ಪರ್ಧಿಸಲಿವೆ.




Post a Comment

0 Comments