ಇಬ್ಬರು ಮಹಿಳಾ ಅಧಿಕಾರಿಗಳಿಗೆ ಗೌರವವನ್ನು ಅರ್ಪಿಸಿದ ನೌಕಾಪಡೆ

ಭಾರತೀಯ ನೌಕಾಪಡೆಯು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪ್ರಯಾಣಿಸುತ್ತಿರುವ ತನ್ನ ಇಬ್ಬರು ಅಧಿಕಾರಿಗಳ ಪ್ರಯಾಣದ ವಿಡಿಯೋ ಹಂಚಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಿದೆ. ನೌಕಾಪಡೆಯು ಮಹಿಳಾ ಅಧಿಕಾರಿಗಳ ಧೈರ್ಯ ಮತ್ತು ದೃಢತೆಯನ್ನು ಶ್ಲಾಘಿಸಿ, ಅವರ ಪ್ರಯಾಣ ನಾರಿ ಶಕ್ತಿಯ ಪ್ರಬಲ ಸಂಕೇತವೆಂದು ಬಣ್ಣಿಸಿದೆ.
ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ ಮತ್ತು ಲೆಫ್ಟಿನೆಂಟ್ ಕಮಾಂಡರ್ ರೂಪ ಎ ಅವರು 2024ರ ಅಕ್ಟೋಬರ್ 2ರಂದು ಐಎನ್ಎಸ್ ತಾರಿಣಿ ಹಡಗಿನಲ್ಲಿ ಜಾಗತಿಕ ಪ್ರದಕ್ಷಿಣೆ ಕಾರ್ಯಚರಣೆಯನ್ನು ಆರಂಭಿಸಿದ್ದರು. ಇದು ನಾಲ್ಕು ಖಂಡಗಳು, ಮೂರು ಸಾಗರಗಳು ಮತ್ತು ಮೂರು ಸವಾಲಿನ ಕೇಪ್‌ಗಳನ್ನು ಒಳಗೊಂಡ 21,600 ನಾಟಿಕಲ್ ಮೈಲುಗಳ ಅಂದರೆ 40,000 ಕಿಲೋಮೀಟರ್ ಪ್ರಯಾಣ ವಾಗಿದ್ದು ಈ ವರ್ಷದ ಮೇ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಇಬ್ಬರು ಮಹಿಳಾ ಅಧಿಕಾರಿಗಳು ಸಮುದ್ರದಲ್ಲಿ ಅಲೆಗಳನ್ನು ತಡೆದುಕೊಂಡು ಬಿರುಗಾಳಿಯ ಮೂಲಕ ನೌಕಯಾನ ಮಾಡುತ್ತಾರೆ. ಸಮುದ್ರದಂತೆ ಅವರ ಧೈರ್ಯಕ್ಕೆ ಯಾವುದೇ ಮಿತಿ ಇಲ್ಲ. ಅವರ ಸಾಹಸವನ್ನು ಜಗತ್ತೇ ನೋಡಿ ಕೊಂಡಾಡುತ್ತಿದೆ. ಅದು ಇತರರಿಗೂ ಸ್ಪೂರ್ತಿಯಾಗಿದೆ ಎಂದು ನೌಕಾಪಡೆ ತಿಳಿಸಿದೆ.

Post a Comment

0 Comments