ಈ ಇಬ್ಬರು ಗಗನಯಾನಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಲ್ಪಾವಧಿ ಭೇಟಿಯು ಇದೀಗ 10 ತಿಂಗಳ ಉಳಿಯುವಿಕೆಯಾಗಿ ಪರಿಣಮಿಸಿದ್ದು, ಭೂಮಿಗೆ ಕರೆತರುವ ನಾಸಾದ ಪ್ರಯತ್ನ ತಾಂತ್ರಿಕ ಸಮಸ್ಯೆಗಳಿಂದ ಮತ್ತಷ್ಟು ವಿಳಂಬವಾಗುತ್ತಿದೆ. ಇವರನ್ನು ಕರೆ ತರಲು ಬಾಹ್ಯಾಕಾಶಕ್ಕೆ ತೆರಳಬೇಕಿದ್ದ ಗಗನಯಾತ್ರಿಗಳನ್ನು ಹೊತ್ತ ಬಾಹ್ಯಾಕಾಶ ನೌಕೆ ಉಡಾವಣೆ ಮತ್ತೆ ವಿಳಂಬವಾಗಿ ಮುಂದೂಡಲ್ಪಟ್ಟಿದೆ.
ನಾಸಾದ ಫೇಸ್ ಎಕ್ಸ್ crew-10 ಮಿಷನ್ನ ಗಗನಯಾತ್ರಿಗಳನ್ನು ಹೊತ್ತ ಫಾಲ್ಕನ್ 9 ರಾಕೆಟ್ ಬುಧವಾರ ಅಮೆರಿಕದ ಕಾಲಮಾನ 7:48 ರ ವೇಳೆಗೆ (ಭಾರತೀಯ ಕಾಲಮಾನ ಮಧ್ಯರಾತ್ರಿ 1:30) ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್ ನಿಂದ ಉಡಾವಣೆಯಾಗಬೇಕು. ಆದರೆ ಉಡಾವಣೆಗೆ ಕೇವಲ 45 ನಿಮಿಷ ಬಾಕಿ ಇರುವಾಗ ಲಾಂಚನ್ನು ರದ್ದುಪಡಿಸಲಾಗಿದೆ. ಗಗನಯಾತ್ರಿಗಳು ಬಾಹ್ಯಾಕಾಶ ನೌಕೆಯೊಳಗೆ ಹೊಕ್ಕ ನಂತರ ಗ್ರೌಂಡ್ ಸೈಡ್ ನಲ್ಲಿರುವ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಉಡಾವಣೆಯನ್ನು ರದ್ದುಪಡಿಸಲಾಯಿತು. ಗುರುವಾರ ಅಥವಾ ಶುಕ್ರವಾರ ಈ ಬಗ್ಗೆ ಸಮಸ್ಯೆಗಳನ್ನು ಪರಿಹರಿಸಿ ಮತ್ತೆ ನೌಕೆಯನ್ನು ಉಡಾವಣೆ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ನಾಸಾ ಮಾಹಿತಿ ನೀಡಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಭೂಮಿಗೆ ಮರಳ ಬೇಕಿದ್ದ ಸುನಿತಾ ವಿಲಿಯಮ್ಸ್ ,ಬುಚ್ ವಿಲ್ಮೊರ್ ಜೋಡಿ ಅವರ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯು ಪ್ರೊಪಲ್ಶನ್ ಸಮಸ್ಯೆಗಳನ್ನು ಎದುರಿಸಿದ ಕಾರಣ ಈ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ನಾಸಾ ಈ ಇಬ್ಬರು ಗಗನ ಯಾತ್ರಿಗಳನ್ನು ಮತ್ತೆ ಭೂಮಿಗೆ ಕರೆತರಲು ಸತತ ಪ್ರಯತ್ನ ನಡೆಸುತ್ತಲೇ ಇದ್ದು, ತಾಂತ್ರಿಕ ದೋಷಗಳಿಂದ ಮತ್ತೆ ಮತ್ತೆ ವಿಳಂಬವಾಗುತ್ತಲೇ ಇದೆ. ಆದಷ್ಟು ಬೇಗ ಈ ಇಬ್ಬರು ಗಗನ ಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿ ಬರಲಿ ಎಂಬುದೇ ಎಲ್ಲರ ಆಶಯ.
0 Comments