ಅಮೇರಿಕಾದ ರಾಷ್ಟ್ರ ಸ್ಥಾಪನೆಗಾಗಿ 250 ವರ್ಷಗಳೇ ಕಳೆದರೂ ಅಧಿಕೃತ ರಾಷ್ಟ್ರಭಾಷೆ ಎಂಬುದು ಇರಲಿಲ್ಲ. ಟ್ರಂಪ್ ಅವರು ಇಂಗ್ಲಿಷನ್ನು ರಾಷ್ಟ್ರಭಾಷೆಯೆಂದು ಘೋಷಿಸಿರುವ ಆದೇಶವು ರಾಷ್ಟ್ರದಲ್ಲಿ ಏಕತೆ ಮೂಡಿಸುವ ಮತ್ತು ಸರ್ಕಾರದ ದಕ್ಷತೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ ಎಂದು ಶ್ವೇತಭವನ ಅಭಿಪ್ರಾಯ ಪಟ್ಟಿದೆ.
ಅಮೇರಿಕಾದ ಗಣರಾಜ್ಯ ಸ್ಥಾಪನೆಯಾದ ಸಮಯದಿಂದ ಇಂಗ್ಲಿಷ್ ಅನ್ನು ರಾಷ್ಟ್ರಭಾಷೆಯಾಗಿ ಬಳಸಲಾಗುತ್ತಿದೆ. ಅಮೆರಿಕದ ಐತಿಹಾಸಿಕ ಆಡಳಿತಾಕಳಿಗಳಾದ ಸ್ವಾತಂತ್ರ್ಯ ದೊರಕಿದ ಘೋಷಣೆ ಮತ್ತು ಸಂವಿಧಾನ ಕೂಡ ಇಂಗ್ಲಿಷ್ ಭಾಷೆಯಲ್ಲಿದೆ. ಈ ಮೂಲಕ ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಸಾರ್ವಜನಿಕ ಸೇವೆಗಳಲ್ಲಿ ಇಂಗ್ಲಿಷ್ ಮಿತ ಬಳಕೆಗೆ ರೂಪಿಸಿದ್ದ ನೀತಿಯನ್ನು ಟ್ರಂಪ್ ಆಡಳಿತ ರದ್ದುಗೊಳಿಸಿದೆ. ಅಮೆರಿಕದಲ್ಲಿ 340 ಮಿಲಿಯನ್ ನಿವಾಸಿಗಳಲ್ಲಿ ಸುಮಾರು 68 ಮಿಲಿಯನ್ ಜನರು ಇಂಗ್ಲಿಷನ್ನು ಹೊರತುಪಡಿಸಿ ಬೇರೆ ಭಾಷೆಯನ್ನು ಮಾತಾಡುತ್ತಾರೆ. ಇದು 160ಕ್ಕೂ ಹೆಚ್ಚು ಸ್ಥಳೀಯ ಅಮೆರಿಕನ್ ಭಾಷೆಗಳನ್ನು ಒಳಗೊಂಡಿದೆ ಎಂದು ಅಮೆರಿಕದ ಜನಗಣತಿಯ ವರದಿ ಮಾಹಿತಿ ನೀಡಿದೆ. ಈಗಾಗಲೇ 30 ರಾಜ್ಯಗಳು ಇಂಗ್ಲಿಷ್ ಅನ್ನು ತಮ್ಮ ಅಧಿಕೃತ ಭಾಷೆ ಎಂದು ಘೋಷಿಸಿದೆ.
0 Comments