ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್ ಇನ್ಮೇಲೆ "ಕಾಮನ್ ವೆಲ್ತ್ ಸ್ಪೋರ್ಟ್ಸ್"

ಕಾಮನ್ಗೇ ವೆಲ್ತ್ ಗೇಮ್ಸ್ ಫೆಡರೇಷನ್ (ಸಿಜಿಎಫ್) ಸೋಮವಾರ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು, "ಕಾಮನ್ವೆಲ್ತ್ ಸ್ಪೋರ್ಟ್ಸ್" ಎಂದು ತನ್ನ ಹೊಸ ಹೆಸರನ್ನು ಘೋಷಣೆ ಮಾಡಿದೆ.
ಮಾರ್ಚ್ 10ನೇ ತಾರೀಕಿನ ಕಾಮನ್ವೆಲ್ತ್ ದಿನದಂದು ಇದು ತನ್ನ ಹೆಸರು ಬದಲಾಯಿಸುವ ನಿರ್ಧಾರವನ್ನು ಘೋಷಿಸಿದೆ.
"2025ರ ಕಾಮನ್ವೆಲ್ತ್ ದಿನದಿಂದ, ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಅನ್ನು ಕಾಮನ್ವೆಲ್ತ್ ಸ್ಪೋರ್ಟ್ಸ್ ಎಂದು ಕರೆಯಲಾಗುವುದು"ಎಂದು ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಕಾಮನ್ವೆಲ್ತ್ ಯೂಥ್ ಗೇಮ್ಸ್ ನ ಆಡಳಿತ ಮಂಡಳಿ ತಿಳಿಸಿದೆ. ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ತನ್ನ ಸಾರ್ವಜನಿಕ ಬ್ರಾಂಡ್ ಹೆಸರನ್ನು ಕಾಮನ್ವೆಲ್ತ್ ಸ್ಪೋರ್ಟ್ಸ್ ಎಂದು ಬದಲಾಯಿಸುತ್ತಿದೆ. ಸಂಸ್ಥೆಯು "ಕ್ರೀಡಾ ಫೆಡರೇಶನ್" ಇಂದ "ಕ್ರೀಡಾ ಚಳುವಳಿ"ಗೆ ಪರಿವರ್ತನೆಯಾಗುವುದನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ. 'ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್' ಎಂಬ ಹೆಸರನ್ನು ಕಾನೂನು ಬದ್ಧ ಘಟಕದ ಹೆಸರಾಗಿ ಮಾತ್ರ ಉಳಿಸಿಕೊಳ್ಳಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

Post a Comment

0 Comments