ಮಧ್ಯ ಪ್ರದೇಶವು "ಭಾರತದ ಹುಲಿ ರಾಜ್ಯ" ಎಂದೇ ಖ್ಯಾತಿ ಪಡೆದಿದ್ದು, ಪ್ರಸ್ತುತ 9 ಹುಲಿ ಮೀಸಲು ಪ್ರದೇಶಗಳನ್ನು ಒಳಗೊಂಡಿದೆ. ಇದು ನಮ್ಮ ಜೈವಿಕ ವೈವಿಧ್ಯತೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಮಹತ್ವದ ಮೈಲಿಗಲ್ಲು ಮಾತ್ರವಲ್ಲದೆ ಭಾರತದ ಹುಲಿ ಸಂರಕ್ಷಣಾ ಪ್ರಯತ್ನಗಳು ಜಾಗತಿಕ ಮಾದರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಮಾಧವ್ ಹುಲಿ ಮೀಸಲು ಪ್ರದೇಶವು ಮಧ್ಯ ಪ್ರದೇಶದ 9ನೇ ಮೀಸಲು ಪ್ರದೇಶ ಎಂಬುದಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಘೋಷಿಸಿದ್ದಾರೆ. ಭೂಮಿಯ ಮೇಲಿನ ಪರಿಸರ ವೈವಿಧ್ಯತೆಯನ್ನು ಪುನಃಸ್ಥಾಪಿಸಲು ಐತಿಹಾಸಿಕ ಒತ್ತು ನೀಡುವುದರೊಂದಿಗೆ, ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಲಾಗುತ್ತಿದೆ ಎಂದು ಯಾದವ್ ತಿಳಿಸಿದ್ದಾರೆ.
ಭಾರತದ ಕಾಡುಗಳಲ್ಲಿ ಸುಮಾರು 3800 ಹುಲಿಗಳಿವೆ. ಅದರಲ್ಲಿ 785 ಹುಲಿಗಳು ಮಧ್ಯ ಪ್ರದೇಶದ ಕಾಡುಗಳಲ್ಲೇ ಇವೆ. ಈ ಹಿನ್ನೆಲೆಯಲ್ಲಿ ಭಾರತದ ಹೃದಯ ಎಂದೇ ಕರೆಯಲ್ಪಡುವ ಮಧ್ಯ ಪ್ರದೇಶಕ್ಕೆ "ಹುಲಿ ರಾಜ್ಯ" ಎಂಬ ಪಟ್ಟವೂ ಇದೆ. ಕರ್ನಾಟಕದ ಕಾಡುಗಳಲ್ಲಿ 563 ಹುಲಿಗಳಿದ್ದು, ಎರಡನೇ ಸ್ಥಾನದಲ್ಲಿದೆ. 560 ಹುಲಿಗಳೊಂದಿಗೆ ಉತ್ತರಾಖಂಡ 3ನೇ ಸ್ಥಾನವನ್ನು ಪಡೆದುಕೊಂಡಿದೆ.
0 Comments