ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ


ಇಂಟರ್ನ್ಶಿಪ್ ಎಂಬುದು ಕೆಲವು ಕೋರ್ಸ್ ಗಳಿಗೆ ಕಡ್ಡಾಯವಾಗಿದ್ದು, ಒಬ್ಬ ವಿದ್ಯಾರ್ಥಿ ಇಂಟರ್ನ್ಶಿಪ್ ಪೂರ್ಣಗೊಳಿಸಿದರೆ ಮಾತ್ರ ಆತನ ವಿದ್ಯಾಭ್ಯಾಸದ ಕೋರ್ಸ್ ಪೂರ್ಣಗೊಂಡಂತಾಗುತ್ತದೆ. ಇಲ್ಲಿಯವರೆಗೆ ಕೆಲವೊಂದು ಕೋರ್ಸ್ ಗಳಿಗೆ ಮಾತ್ರ ಇಂಟರ್ನ್ಶಿಪ್ ಕಡ್ಡಾಯವಾಗಿತ್ತು. ಇದೀಗ ಕರ್ನಾಟಕ ಸರ್ಕಾರವು ರಾಜ್ಯದ ಡಿಪ್ಲೊಮೋ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿಚಾರದಲ್ಲಿಯೂ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮುಂದಿನ ವರ್ಷದಿಂದ ಇಂಟೆನ್ಶಿಪ್ ಮಾಡುವುದು ಕಡ್ಡಾಯ. ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಎಂಟ್ರನ್ಶಿಪ್ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, ಕಾರ್ಯರೂಪಕ್ಕೆ ತರುವಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ಡಿಪ್ಲೋಮೋ ಮತ್ತು ಪಾಲಿಟೆಕ್ನಿಕ್ ಕೋರ್ಸಿನ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಡ್ಡಾಯಗೊಳಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸದ್ಯಕ್ಕೆ ಈ ವಿಚಾರವಾಗಿ ಹರಡು ಪ್ರತಿ ಸಿದ್ಧಪಡಿಸಲು ಸರಕಾರವು ಉದ್ಯಮ ವಲಯದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದೆ. 



Post a Comment

0 Comments