ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ವಧು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜೂನಿಯರ್ ಫಂಕ್ಷನ್ ಟೆಂತ್ ಅಥವಾ ಕ್ಲಿನಿಕಲ್ ಸೈಕಾಲಜಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
1.ಅಭ್ಯರ್ಥಿಯು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
2.ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂಫಿಲ್ ಪೂರ್ಣಗೊಳಿಸಿರಬೇಕು.
3.ಅಭ್ಯರ್ಥಿಯು ಎವಿಯೇಷನ್ ಸೈಕಾಲಜಿಸ್ಟ್ ಆಗಿ ಎರಡು ವರ್ಷಗಳ ವೃತ್ತಿ ಅನುಭವ ಹೊಂದಿರುವವರು ಆಗಿರಬೇಕು.
4. 21.02.2025 ಕ್ಕೆ ಗರಿಷ್ಠ 65 ವರ್ಷ ವಯಸ್ಸಿನೊಳಗಿನವರಾಗಿರಬೇಕು.
ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ನಂತರ ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವೇತನವು 50,000 ರೂಂ. ನಿಗದಿ ಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ircontracthr.sraai.aero ಇ-ಮೇಲ್ ಐಡಿಗೆ ಫೆಬ್ರವರಿ 21ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ aai.aero , ಅಧಿಸೂಚನೆಗಾಗಿ https://bit.ly/42RjU7y ಪರಿಶೀಲಿಸಬಹುದಾಗಿದೆ.
0 Comments