ಛತ್ತೀಸ್ ಗಢ ರಾಜ್ಯದ ರಾಯ್ಪುರ ನಗರದ ಹತ್ತಿರದಲ್ಲಿ ತುಳಸಿ ಎಂಬ ಹೆಸರಿನ ಪುಟ್ಟ ಗ್ರಾಮವೊಂದಿದೆ. ಈ ಗ್ರಾಮದಲ್ಲಿ 4000 ನಿವಾಸಿಗಳು ವಾಸಿಸುತ್ತಿದ್ದಾರೆ. ಆದರೆ ಪ್ರಸ್ತುತ ಭಾರತದ ಯುಟ್ಯೂಬ್ ರಾಜಧಾನಿ ಎಂಬ ಬಿರುದನ್ನು ಗಳಿಸಿದ್ದು ಇದೇ ತುಳಸಿ ಗ್ರಾಮ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ಗ್ರಾಮ ಮನ್ನಣೆ ಗಳಿಸಿದೆ. ಇತ್ತೀಚೆಗೆ ಬಿಬಿಸಿ ವರ್ಲ್ಡ್ ತನ್ನ ವರದಿಯಲ್ಲಿ ಈ ಗ್ರಾಮದ ವಿಶಿಷ್ಟ ಡಿಜಿಟಲ್ ವಿಕಾಸವನ್ನು ತೋರಿಸಿದೆ.
2018ರಲ್ಲಿ ಜೈ ವರ್ಮ ಮತ್ತು ಜ್ಞಾನೇಂದ್ರ ಶುಕ್ಲಾ ಎಂಬವರು 1,25,000ಕ್ಕೂ ಹೆಚ್ಚು ಚಂದದಾರರನ್ನು ಮತ್ತು 260 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿ ಬೀಯಿಂಗ್ ಚತ್ತೀಸ್ಗಢಿಯಾ ಎಂಬ ಚಾನಲ್ ಪ್ರಾರಂಭಿಸಿದಾಗ ಯೂಟ್ಯೂಬ್ ಕ್ರಾಂತಿ ಪ್ರಾರಂಭವಾಯಿತು. ಅವರು ತಿಂಗಳಿಗೆ ಸುಮಾರು 30 ಸಾವಿರ ರೂಪಾಯಿಗಳಷ್ಟು ಆದಾಯವನ್ನು ಗಳಿಸಲಾರಂಭಿಸಿದರು. ಯೂಟ್ಯೂಬ್ ಗಾಗಿ ಅವರು ತಮ್ಮ ನೌಕರಿಯನ್ನೇ ತೊರೆದು ಯೂಟ್ಯೂಬ್ ವಿಡಿಯೋಗಳನ್ನು ಮಾಡತೊಡಗಿದರು. ಅವರ ಯಶಸ್ಸು ಅಸಂಖ್ಯಾತ ಗ್ರಾಮಸ್ಥರು ಯೂಟ್ಟ್ಯೂಬ್ ಮೂಲಕ ಕಂಟೆಂಟ್ ರಚನೆಯನ್ನು ಆರಂಭಿಸಲು ಪ್ರೇಯಸಿತು.
ರಾಜ್ಯ ಸರ್ಕಾರ 2023ರಲ್ಲಿ ಅತ್ಯಾಧುನಿಕ ಸ್ಟುಡಿಯೋವನ್ನು ಈ ಗ್ರಾಮದಲ್ಲಿ ಸ್ಥಾಪಿಸಿದೆ. ಆದರೆ ಇಲ್ಲಿನ ಅನೇಕ ನಿವಾಸಿಗಳು ತಮ್ಮದೇ ಆದ ನಿರ್ಮಾಣ ಸೆಟ್ಗಳನ್ನು ರಚಿಸಿಕೊಂಡಿದ್ದಾರೆ. ಗ್ರಾಮದ ಯಶಸ್ಸಿನ ಕಥೆ, 27 ವರ್ಷದ ಪಿಂಕಿ ಸಾಹುವಿನೊಂದಿಗೆ ಉತ್ತುಂಗಕ್ಕೇರಿತು. ಅವರ ನೃತ್ಯದ ವಿಡಿಯೋಗಳು ಬಹು ಜನಪ್ರಿಯವಾಗಿ ಮುಂದೆ 7 ಪ್ರಾದೇಶಿಕ ಚಲನಚಿತ್ರಗಳಲ್ಲಿ ಅವರಿಗೆ ಪಾತ್ರಗಳೂ ದೊರೆತವು.
ಈ ಹಳ್ಳಿಯಲ್ಲಿ ಯೂಟ್ಯೂಬ್ ಚಾನೆಲ್ ಆರ್ಥಿಕ ಲಾಭಗಳನ್ನು ಮೀರಿ ಸಾಮಾಜಿಕ ಸಮಾನತೆಗೆ ಕಾರಣವಾಗಿದೆ. ವಿಶೇಷವಾಗಿ ಈಗ ತಮ್ಮದೇ ಆದ ವಾಹಿನಿಗಳನ್ನು ನಡೆಸುತ್ತಿರುವ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಕೊರೋನಾ ಸಮಯದಲ್ಲಿ ಯೂಟ್ಯೂಬ್ ಬಳಕೆ ಹೆಚ್ಚಳವಾಗಿದ್ದರಿಂದ ಅನೇಕರು ತಮ್ಮ ಚಂದದಾರರನ್ನೇ ಗ್ರಾಹಕರಾಗಿ ಬಳಸಿಕೊಂಡು ತಮ್ಮ ವ್ಯವಹಾರಗಳಲ್ಲೂ ಸೈ ಎನಿಸಿಕೊಂಡರು. 49 ವರ್ಷದ ರೈತ ನೇತ್ರಾಮ್ ಯಾದವ್ ಯುವಕರನ್ನು ನಕಾರಾತ್ಮಕ ಪ್ರಭಾವಗಳಿಂದ ದೂರವಿಟ್ಟಿದ್ದಕ್ಕಾಗಿ ಈ ಯೋಜನೆಯನ್ನು ಪ್ರಶಂಶಿಸಿದ್ದಾರೆ.
0 Comments