ಮೊದಲ ಬಾರಿ ರಾಜ್ಯ ಅರಣ್ಯ ಪಡೆಗೆ ಮಹಿಳಾ ಅಧಿಕಾರಿ ನೇಮಕ

ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆಯ ಮುಖ್ಯಸ್ಥರನ್ನಾಗಿ ಹಿರಿಯ ಐ.ಎಫ್ಎ.ಸ್ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ನೇಮಿಸಿ ಸರಕಾರವು ಆದೇಶ ಹೊರಡಿಸಿದೆ. 
ಈ ಮೂಲಕ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ರಾಜ್ಯ ಅರಣ್ಯ ಪಡೆ ಮುಖ್ಯಸ್ಥರಾಗಿ ನೇಮಕಗೊಂಡಿರುವುದು ವಿಶೇಷ. ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದು ಅರಣ್ಯ ಸಂರಕ್ಷಣಾ ಪಡೆಗೆ ಮುಖ್ಯಸ್ಥೆಯಾಗಿ ಮಹಿಳೆಯೊಬ್ಬರು ನೇಮಕಗೊಂಡಿರುವುದು ಸಂತಸದ ಹಾಗೂ ಹೆಮ್ಮೆಯ ವಿಚಾರವಾಗಿದೆ. ನೂತನ ಅರಣ್ಯ ಪಡೆ ಮುಖ್ಯಸ್ಥರಾಗಿ ನೇಮಕಗೊಂಡ ಮೀನಾಕ್ಷಿ ನೇಗಿ ಅವರು ರಾಜ್ಯ ಅರಣ್ಯ ಸಚಿವ ಈಶ್ವರ್ ಕಂಡ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Post a Comment

0 Comments