ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್‌ಬಿಐ ಫೌಂಡೇಶನ್ ಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದು 13 ತಿಂಗಳ ಕಾರ್ಯಕ್ರಮವಾಗಿದ್ದು 21ರಿಂದ 32 ವರ್ಷದೊಳಗಿನ ಪದವೀಧರರು ಹಾಗೂ ಯುವ ವೃತ್ತಿಪರರಿಗೆ ಅವಕಾಶ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.
ಆರೋಗ್ಯ, ಆಹಾರ ಭದ್ರತೆ, ಪರಿಸರ ಸಂರಕ್ಷಣೆ, ಸೆಲ್ಫ್ ಗವರ್ನೆನ್ಸ್, ಮಹಿಳಾ ಸಬಲೀಕರಣ, ಶಿಕ್ಷಣ, ತಂತ್ರಜ್ಞಾನ ಹನ್ನೆರಡು ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಇಚ್ಛೆಯಿದ್ದು, ಗ್ರಾಮೀಣ ಭಾಗಗಳನ್ನು ಸುಸ್ಥಿರ ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1.10.2025ಕ್ಕೆ ಅನ್ವಯವಾಗುವಂತೆ ಪದವಿ ಮುಗಿಸಿರಬೇಕು. ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 16000ರೂ. ಜೊತೆಗೆ ಇತರ ಭತ್ಯೆಗಳನ್ನು ನೀಡಲಾಗುತ್ತದೆ. ಫೆಲೋಶಿಪ್ ಪೂರ್ಣಗೊಂಡ ನಂತರ 90,000ರೂ. ಭತ್ಯೆಯನ್ನೂ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ https://www.youthforindia.org/ ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.
0 Comments