ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಯು.ಪಿ.ಎಸ್.ಎಲ್) ಫೈನಾನ್ಸ್ ಮತ್ತು ಎಲೆಕ್ಟ್ರಿಕಲ್ ಡಿಸೈನ್ ಕ್ಷೇತ್ರದಲ್ಲಿ ಕೆಲವೊಂದು ಖಾಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
*ಖಾಲಿಯಿರುವ ಹುದ್ದೆಗಳು*
ಮ್ಯಾನೇಜರ್ ಹುದ್ದೆ: 1
ಡೆಪ್ಯುಟಿ ಮ್ಯಾನೇಜರ್ ಹುದ್ದೆ:2
*ವಿದ್ಯಾರ್ಹತೆ*
ಅಭ್ಯರ್ಥಿಗಳು ಸಿಎ, ಸಿಎಂಎ, ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ರಿಂದ 40 ವರ್ಷದೊಳಗಿರಬೇಕು. ಎಸ್ಸಿ/ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿಯ ಸಡಿಲಿಕೆ ಅನ್ವಯವಾಗಲಿದೆ. ಎಸ್.ಸಿ/ಎಸ್.ಟಿ /ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರ ಎಲ್ಲಾ ವರ್ಗದ ಅಭ್ಯರ್ಥಿಗಳು 1000ರೂ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಪವರ್ ಪಾಯಿಂಟ್ ಪ್ರೆಸೆಂಟೇಷನ್, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮ್ಯಾನೇಜರ್ ಹುದ್ದೆಗೆ 60,000-1,80,000 ರೂ.,ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ 50,000-1,60,000 ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಯುಪಿಎಸ್ಎಲ್ ವೆಬ್ಸೈಟ್ udupicsl.com ಗೆ ಭೇಟಿ ನೀಡುವ ಮೂಲಕ ಮಾರ್ಚ್ 3ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ಬಗ್ಗೆ ಅಧಿಸೂಚನೆಗಾಗಿ https://bit.ly/4gpXNbf ಪರಿಶೀಲಿಸಬಹುದಾಗಿದೆ.
0 Comments