ಅಟ್ಲಾಂಟಿಕ್ ದಾಟಿ ಅಮೋಘ ಸಾಧನೆ ಮಾಡಿದ ಅನನ್ಯ


ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ರೋಯಿಂಗ್ ಮೂಲಕ ಕ್ರಮಿಸಿ ಹೊಸ ಇತಿಹಾಸವನ್ನು ಭಾರತೀಯರೊಬ್ಬರು ನಿರ್ಮಿಸಿದ್ದಾರೆ. ಕನ್ನಡ ಕವಿ ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಪ್ರಸಾದ್ ರವರೇ ಈ ಸಾಧನೆಯನ್ನು ಮಾಡಿದ ಸಾಧಕಿ.

ವಿಶ್ವದ ಅತ್ಯಂತ ಕಠಿಣ ರೋಯಿಂಗ್ ರೇಸ್ನ ಸೋಲೋ ವಿಭಾಗದಲ್ಲಿ ಅನನ್ಯ ರವರು ಭಾಗಿಯಾಗಿದ್ದು, ಕಳೆದ ಡಿಸೆಂಬರ್ 12ರಂದು ಸ್ಪೇನ್ ಸಮೀಪದ ಲಾ ಗೊಮೆರಾ ದ್ವೀಪದಿಂದ ಈ ಮಹಾಯಾನವನ್ನು ಆರಂಭಿಸಿದ್ದರು. ಫೆಬ್ರವರಿ 1 ರಂದು ಯಾನವನ್ನು ಪೂರ್ಣಗೊಳಿಸಿದ್ದು, ಬರೋಬ್ಬರಿ 52 ದಿನ, 5 ಗಂಟೆ, 44 ನಿಮಿಷದಲ್ಲಿ 4,800 ಕಿಲೋಮೀಟರ್ಗಳ ದೂರವನ್ನು ಕ್ರಮಿಸುವ ಮೂಲಕ ತಮ್ಮ ಗುರಿಯನ್ನು ತಲುಪಿದ್ದಾರೆ. ಈ ಮೂಲಕ ಇಂತಹ ಸಾಧನೆಯನ್ನು ಮಾಡಿದ ಮೊದಲ ಶ್ವೇತ ವರ್ಣಿಯೇತರ ಮಹಿಳೆ ಮತ್ತು ಮೊದಲ ಭಾರತೀಯ ಮಹಿಳೆ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.
ಅನನ್ಯ ಪ್ರಸಾದ್ ಅವರು ಜಿ.ಎಸ್ ಶಿವರುದ್ರಪ್ಪನವರ ಮಗನಾದ ಶಿವಪ್ರಸಾದರ ಪುತ್ರಿಯಾಗಿದ್ದು, ಈ ಯಾನಕ್ಕಾಗಿ ಅವರು ಕಠಿಣ ಶ್ರಮವನ್ನು ವಹಿಸಿದ್ದರು. ಈ ಸಾಧನೆಗಾಗಿ ಅವರು 25 ಅಡಿ ಅಳತೆಯ ಬೋಟ್ ಅನ್ನು ಕೂಡ ತಯಾರಿಸಿದ್ದರು. ಅಷ್ಟೇ ಅಲ್ಲದೆ ಬೋಟ್ ರಿಪೇರಿಯನ್ನು ಸಹ ಕಲಿತಿದ್ದು ಅದಕ್ಕಾಗಿಯೇ ಪ್ರತಿನಿತ್ಯ 50 ಮೈಲು ರೋಯಿಂಗ್ ಮಾಡಿ ಅಭ್ಯಾಸ ನಡೆಸುತ್ತಿದ್ದರು. ಕೊನೆಗೂ ತಾವು ಅಂದುಕೊಂಡಂತೆ ಅಟ್ಲಾಂಟಿಕ್ ಸಾಗರದಲ್ಲಿ ಸಾಗರ ಯಾನವನ್ನು ಮಾಡಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.



Post a Comment

0 Comments