ಗೋವಾ ಪ್ರವಾಸಿಗರಿಗೆ ಕ್ಯೂಆರ್ ಕೋಡ್; ದೇಶದಲ್ಲೇ ಮೊದಲ ಪ್ರಯೋಗ

ಆಧುನಿಕ ಯುಗದಲ್ಲಿ ಎಲ್ಲೆಲ್ಲೂ ಕ್ಯೂಆರ್ ಕೋಡ್ ಅಬ್ಬರ ತುಂಬಾನೇ ಜೋರಾಗಿದೆ. ಎಲ್ಲಿ ಹೋದರೂ ಕ್ಯೂಆರ್ ಕೋಡ್ಗಳು ಕಾಣಿಸುತ್ತವೆ. ಹಣ ಪಾವತಿ ಅಥವಾ ಇನ್ಯಾವುದೇ ಕೆಲಸಕ್ಕೂ ಕೆಆರ್ ಕೋಡ್ ಸ್ಕ್ಯಾನ್ ಮಾಡಿದರೆ ವೇಗವಾಗಿ ಕೆಲಸ ಮುಗಿಯುತ್ತದೆ. ಆದರೆ ಗೋವಾ ಪ್ರವಾಸಿಗರಿಗೆ ಕ್ಯೂಆರ್ ಕೋಡ್ ನೀಡುವ ಮೂಲಕ ಸುದ್ದಿಯಾಗುತ್ತಿದೆ.
ಹೌದು.. ಗೋವಾದಲ್ಲಿ ಪ್ರವಾಸಿಗರ ಸುಗಮ ಸಂಚಾರಕ್ಕಾಗಿ ಪೊಲೀಸರು ವಿಶೇಷ ಕ್ಯೂಆರ್ ಕೋಡ್ ಪರಿಚಯಿಸಲು ಮುಂದಾಗಿದ್ದಾರೆ. 12 ಗಂಟೆಗಳ ಕಾಲ ಮಾನ್ಯವಾಗಿರುವ ಈ ಕ್ಯೂ ಆರ್ ಕೋಡ್ ನೆರವಿನಿಂದ ಪದೇಪದೇ ಪೊಲೀಸರಿಗೆ ವಾಹನಗಳ ದಾಖಲೆ ತೋರಿಸಬೇಕಾದ ಅಗತ್ಯವಿರುವುದಿಲ್ಲ. ಈ ಕ್ರಮ ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಗೋವಾ ಪಾತ್ರವಾಗುತ್ತಿದೆ.

ಪ್ರವಾಸಿಗರ ಅನುಕೂಲಕ್ಕಾಗಿ ಪರಿಚಯಿಸಲಾಗಿದ್ದು, ಇದರ ಮೂಲಕ ಪ್ರಯಾಣಿಕರು ಒಮ್ಮೆ ದಾಖಲೆ ಸ್ಕ್ಯಾನ್ ಮಾಡಿದರೆ ಸಾಕಾಗುತ್ತದೆ. ನಂತರ ಪ್ರಯಾಣಿಕರು ಪ್ರಯಾಣದಲ್ಲಿ ಪೊಲೀಸರಿಗೆ ಪದೇಪದೇ ದಾಖಲೆ ತೋರಿಸುವ ಅಗತ್ಯವಿರುವುದಿಲ್ಲ. ಪೊಲೀಸರು ಕೇಳಿದರೆ ಪ್ರವಾಸಿಗರು ಕ್ಯೂಆರ್ ಕೋಡ್ ತೋರಿಸಿದರೆ ಸಾಕು. ಇದುವರೆಗೆ 4000 ಕ್ಯೂಆರ್ ಕೋಡ್ ಗಳನ್ನು ಪೊಲೀಸರು ಪ್ರವಾಸಿಗರಿಗೆ ನೀಡಿದ್ದಾರೆ. ಗೋವಾದ ಪಡ್ರೆ ಕಾನ್ಸಿಕಾವೊ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ನೂತನ ಅಪ್ಲಿಕೇಶನ್ ಅನ್ನು ಆವಿಷ್ಕಾರ ಮಾಡಿದ್ದಾರೆ.

Post a Comment

0 Comments