ನಾಳೆಯಿಂದ “ಏರೋ ಇಂಡಿಯಾ 2025”; ದೇಶಿಯ ನಿರ್ಮಿತ ವಿಮಾನಗಳ ಪ್ರದರ್ಶನ



ಬೆಂಗಳೂರಿನ ಯಲಹಂಕ ವಾಯುಪಡೆ ನೆಲೆಯು ಏರ್ ಶೋ ಗೆ ಭರ್ಜರಿ ಸಿದ್ದತೆ ನಡೆಸಿದೆ. ಫೆಬ್ರವರಿ 10ರಿಂದ 14ರವರೆಗೆ ನಡೆಯಲಿರುವ “ಏರೋ ಇಂಡಿಯಾ-2025” ಯಲಹಂಕದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ದೇಶಿಯವಾಗಿ ಅಭಿವೃದ್ಧಿಪಡಿಸಿರುವ ವಿವಿಧ ಉತ್ಪನ್ನಗಳು, ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಸಜ್ಜಾಗಿದೆ.

“ನಾವಿನ್ಯತೆ, ಸಹಭಾಗಿತ್ವ, ಮುಂದಾಳತ್ವ” ಎಂಬ ಪರಿಕಲ್ಪನೆಯಡಿಯಲ್ಲಿ ದೇಶಿಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿರುವ ಲೈಟ್ ಯುಟಿಲಿಟಿ ಹೆಲಿಕಾಫ್ಟರ್ (ಎಲ್.ಯು.ಎಚ್) ಈ ಬಾರಿಯ ಏರ್ ಶೋನ ವಿಶೇಷ ಆಕರ್ಷಣೆಯಾಗಿರ ಲಿದೆ. ಅಷ್ಟೇ ಅಲ್ಲದೆ ಹೆಚ್ಎಎಲ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳಲ್ಲಿ ಇರುವಂತಹ ಮಾನವ ಸಹಿತ ಮತ್ತು ಮಾನವ ರಹಿತ ವಿಮಾನಗಳಿಗೆ ಸಂಬಂಧಿಸಿದ ಏವಿಯಾನಿಕ್ಸ್, ಮೆಕ್ಯಾನಿಕಲ್ ಸಿಸ್ಟಮ್, ಎಂಜಿನ್ಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ನೋಡುವ ಅವಕಾಶ ವೀಕ್ಷಕರಿಗಿದೆ ಎಂಬ ಮಾಹಿತಿಯನ್ನು ಎಚ್ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಡಿ.ಕೆ. ಸುನಿಲ್ ಅವರು ತಿಳಿಸಿದ್ದಾರೆ.

ಏರ್ ಶೋ ನೋಡುವುದೇ ವೀಕ್ಷಕರ ಕಣ್ಣಿಗೆ ಹಬ್ಬ. ಅವುಗಳ ಬಗ್ಗೆ ನೋಡಿ ಮಾಹಿತಿಯನ್ನು ತಿಳಿದುಕೊಳ್ಳುವುದು ಕಲಿಯುವ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶವೇ ಸರಿ. ಈ ಬಾರಿ ಎಚ್ಎಎಲ್
ಪೆವಿಲಿಯನ್ ನಲ್ಲಿ ಎಲ್.ಯು.ಎಚ್, ಹಿಂದೂಸ್ತಾನ್ ಟರ್ಬೋ ಟ್ರೈನರ್ (ಎಚ್.ಟಿ.ಟಿ-40), ಸಿಮ್ಯುಲೇಟರ್, ಎಲ್.ಸಿ.ಎ ಎಂ.ಕೆ1ಎ ಮತ್ತು ಎಲ್.ಸಿ.ಎ ಎಂಕೆ1 ಟ್ರೈನರ್, ಹಿಂದೂಸ್ತಾನ್ ಜೆಟ್ ಟ್ರೈನರ್ (ಎಚ್.ಜೆ.ಟಿ-36), ಎಲ್.ಸಿ.ಎಚ್ ಮತ್ತು ಎಂ.ಎಲ್.ಎಚ್ ಎಂ.ಕೆ4 ಮತ್ತು ಹಿಂದುಸ್ತಾನ್ 228 ವಿಮಾನಗಳ ನೈಜ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಎಚ್ ಎ ಎಲ್ ಹಾಲ್ ಹೊರ ಭಾಗದಲ್ಲಿ ಎಲ್.ಸಿ.ಎ ಎಂ.ಕೆ1ಎ ಮತ್ತು ಎಚ್.ಜೆ.ಟಿ-36,ಎಚ್.ಟಿ.ಟಿ-40, ಎಲ್.ಸಿ.ಎ ಎಂ.ಕೆ1 ಟ್ರೈನರ್, ಹಿಂದೂಸ್ತಾನ್ 228, ಡಿಒ-228 ಮತ್ತು ಎಲ್.ಯು.ಎಚ್ ಹೆಲಿಕಾಫ್ಟರ್ಗಳು ಪ್ರದರ್ಶನಕ್ಕಿರಲಿವೆ.

ಎಲ್.ಸಿ.ಎ. ಎಂಕೆ 1ಎ, ಎಚ್.ಜೆ.ಟಿ 36, ಎಚ್.ಟಿ.ಟಿ-40, ಮತ್ತು ಎಲ್.ಯು.ಎಚ್ ಹೆಲಿಕಾಫ್ಟರ್ಗಳು ಹಾರಾಟ ಪ್ರದರ್ಶನ ನೀಡಲಿವೆ. 

ಕಾಂಬ್ಯಾಟ್ ಏರ್ ಟ್ರೈನಿಂಗ್ ಸಿಸ್ಟಮ್, ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ನ (ಎಎಂಸಿಎ) ಮಾದರಿ, ಅಭಿವೃದ್ಧಿ ಹಂತದ ಹೊಸ ತಲೆಮಾರಿನ ಹೆಲಿಕಾಪ್ಟರ್ ಪರಿಕಲ್ಪನೆಗಳು, ಡಿಜಿಟಲ್ ಮ್ಯಾಪ್ ಜನರೇಟರ್,‌ ಕಮ್ಯುನಿಕೇಷನ್ ಸಿಸ್ಟಮ್, ರೇಡಿಯೋ ಕಂಟ್ರೋಲ್ ಪ್ಯಾನೆಲ್ ಮತ್ತಿತರ ಉತ್ಪನ್ನಗಳು, ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. 

ಕ್ರಯೋಜೆನಿಕ್ ಎಂಜಿನ್ ಸಿಇ-20, ಜಿ.ಎಸ್.ಎಲ್.ವಿ ಎಂಕೆ 3 ರಾಕೆಟ್ ಮತ್ತು ಚಂದ್ರಯಾನ-3 ಮಾದರಿಗಳು ಹಾಗೂ ಎಚ್.ಟಿ.ಎಸ್.ಇ-1200 ಮತ್ತು ಜಿಟಿಇಜಿ-60 ಎಂಜಿನ್ಗಳನ್ನು ಕೂಡ ಎಚ್ಎಎಲ್ ಹಾಲ್ನಲ್ಲಿ ನೋಡಬಹುದು.

Post a Comment

0 Comments