ಭಾರತದ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್) ಲ್ಯಾಂಡ್ ಲೈನ್ ಫಿಕ್ಸೆಡ್-ಲೈನ್ ಫೋನ್ಗಳ ಎಸ್ ಟಿ ಡಿ ಕೋಡ್ ಬದಲು 10 ಅಂಕಿಯ ವ್ಯವಸ್ಥೆಯನ್ನು ಪರಿಚಯಿಸಲು ಚಿಂತನೆ ನಡೆಸಿದೆ.
ಫಿಕ್ಸೆಡ್-ಲೈನ್ ಫೋನ್ ಸೇವೆಗಳಿಗೆ ಡಯಲ್ ಮಾಡುವ ಸಂಖ್ಯೆಯ ಪೂರ್ವದಲ್ಲಿ ‘0’ ಹಾಗೂ ಪ್ರದೇಶ ಕೋಡ್ ಬಳಸುವುದು ಕೂಡ ಭಾರತ ದೂರ ಸಂಪರ್ಕ ಪ್ರಾಧಿಕಾರದ ಪ್ರಸ್ತಾವನೆಯಲ್ಲಿ ಸೇರಿದೆ. ಟ್ರಾಯ್ ಸಲಹೆಗಳನ್ನು ಸರಕಾರ ಅಂಗೀಕರಿಸಿದರೆ ಲ್ಯಾಂಡ್ಲೈನ್ ಬಳಕೆದಾರರು ಶೀಘ್ರವೇ ಸ್ಥಳೀಯ ಕರೆಗಳಿಗೆ ಕೂಡ ಪೂರ್ಣ 10 ಅಂಕೆಯ ಸಂಖ್ಯೆಯನ್ನು ಡಯಲ್ ಮಾಡಬೇಕಾಗುತ್ತದೆ. ದೇಶದಲ್ಲಿ ಈಗ ಅಸ್ತಿತ್ವದಲ್ಲಿರುವ ಎಸ್‌ಟಿಡಿ ಕೋಡ್ ವ್ಯವಸ್ಥೆಯನ್ನು ತೆಗೆದು ಹಾಕಿ ಹೊಸ ಸಂಖ್ಯೆಯ ವ್ಯವಸ್ಥೆಯನ್ನು ಜಾರಿಗೊಳಿಸುವುದು ಟ್ರಾಯ್ ನಿರ್ಧಾರವಾಗಿದೆ. ಈ ನಿರ್ಳಧಾರದಿಂದ ಬಳಕೆಯಾಗದ ಫೋನ್ ಸಂಖ್ಯೆಗಳು ಮುಕ್ತಗೊಳ್ಳುತ್ತವೆ. ಟೆಲಿಕಾಂ ವೃತ್ತ ಅಥವಾ ರಾಜ್ಯಮಟ್ಟದ ಆಧಾರದಲ್ಲಿ ಸಂಖ್ಯೆಗಳನ್ನು ನಿಯೋಜಿಸುವುದು ಇದಕ್ಕೆ ಕಾರಣವಾಗಿದೆ
0 Comments