ಹಸಿರು ಕ್ರಾಂತಿಗೆ ಭಾರತದಲ್ಲಿ ಹೊಸ ವೇಗ: ವಿದ್ಯುತ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ!

 ಭಾರತದ ಸ್ವಚ್ಛ ಇಂಧನ ಪಯಣಕ್ಕೆ ಮತ್ತೊಂದು ಆಶಾದಾಯಕ ಬೆಳವಣಿಗೆ ದಾಖಲಾಗಿದೆ. August 3l 2026ರ ಜುಲೈನಲ್ಲಿ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ 19.9% ವಿದ್ಯುತ್ ಸೌರ, ಪವನ ಮತ್ತು ಜೈವಿಕ ಇಂಧನದಂತಹ ನವೀಕರಿಸಬಹುದಾದ ಮೂಲಗಳಿಂದ ಬಂದಿದೆ. 

Grid India ಅಂಕಿಅಂಶಗಳ ಪ್ರಕಾರ, ಜುಲೈನಲ್ಲಿ ದೇಶದ ಒಟ್ಟು ವಿದ್ಯುತ್ ಉತ್ಪಾದನೆ 181,790 MW ಆಗಿದ್ದು, ಅದರಲ್ಲಿ 36,355 MW ನವೀಕರಿಸಬಹುದಾದ ಇಂಧನ ಮೂಲಗಳಿಂದ ಬಂದಿದೆ. ಕಳೆದ ವರ್ಷದ ಜುಲೈನಲ್ಲಿ ನವೀಕರಿಸಬಹುದಾದ ಮೂಲಗಳ ಕೊಡುಗೆ 27,835 MW, ಅಂದರೆ 16.9% ಆಗಿತ್ತು. ಒಂದು ವರ್ಷದ ಅವಧಿಯಲ್ಲಿ ಹಸಿರು ವಿದ್ಯುತ್ ಉತ್ಪಾದನೆಯಲ್ಲಿ 30%ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. 

ಇದರ ಜೊತೆಗೆ, ಭಾರತದಲ್ಲಿ ನವೀಕರಿಸಬಹುದಾದ ಇಂಧನವು ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 42%ಕ್ಕಿಂತ ಹೆಚ್ಚಿನ ಪಾಲು ಹೊಂದಿದೆ. ಜುಲೈ 31, 2026ರ ವೇಳೆಗೆ ದೇಶದ ಒಟ್ಟು non-fossil fuel capacity 300.50 GW ತಲುಪಿದ್ದು, 2030ರ 500 GW ಗುರಿಯ ಶೇ.60ಕ್ಕಿಂತ ಹೆಚ್ಚಿನದನ್ನು ಈಗಾಗಲೇ ಸಾಧಿಸಲಾಗಿದೆ. 

ಸೌರಶಕ್ತಿ ಈ ಪರಿವರ್ತನೆಯ ಪ್ರಮುಖ ಚಾಲಕವಾಗಿದ್ದು, ಭಾರತದ ಸ್ಥಾಪಿತ ಸೌರ ಸಾಮರ್ಥ್ಯ 164.59 GW ತಲುಪಿದೆ. 2014ರಲ್ಲಿ ಕೇವಲ 2.8 GW ಇದ್ದ ಸೌರ ಸಾಮರ್ಥ್ಯವು ಇಂದು ಸುಮಾರು 165 GWಗೆ ಏರಿರುವುದು ಭಾರತದ ಹಸಿರು ಶಕ್ತಿಯ ಪಯಣದ ವೇಗವನ್ನು ತೋರಿಸುತ್ತದೆ. 

ಈ ಬೆಳವಣಿಗೆ ಕೇವಲ ವಿದ್ಯುತ್ ಉತ್ಪಾದನೆಯ ಹೆಚ್ಚಳವಲ್ಲ; ಸ್ವಚ್ಛ ಪರಿಸರ, ಶಕ್ತಿ ಸ್ವಾವಲಂಬನೆ ಮತ್ತು ಮುಂದಿನ ಪೀಳಿಗೆಗೆ ಸುಸ್ಥಿರ ಭಾರತದ ನಿರ್ಮಾಣದತ್ತ ಸಾಗುತ್ತಿರುವ ಮಹತ್ವದ ಹೆಜ್ಜೆಯಾಗಿದೆ.


Post a Comment

0 Comments