ಭಾರತ ಪಾಕಿಸ್ತಾನ ನಡುವೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಂದು ಸಂಜೆ 5:00 ಗಂಟೆಗೆ ಕದನ ವಿರಾಮ ಘೋಷಣೆಯ ಇತ್ತು. ಕದನ ವಿರಾಮ ಘೋಷಣೆಯ ಬಗ್ಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ಮೊದಲು ಟ್ವೀಟ್ ಮಾಡಿದ್ದು, ನಂತರ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅಧಿಕೃತವಾಗಿ ಕದನ ವಿರಾಮದ ಬಗ್ಗೆ ಘೋಷಣೆ ಮಾಡಿದರು. ಆದರೆ ಇದಾದ ಮೂರೇ ಗಂಟೆಗಳಲ್ಲಿ ಪಾಪಿ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ತೋರಿಸಿದ್ದು ಜಮ್ಮು ಕಾಶ್ಮೀರ ಸೇರಿದಂತೆ ಗಡಿ ರಾಜ್ಯಗಳಲ್ಲಿ ಮತ್ತೆ ಡ್ರೋನ್ ದಾಳಿ ನಡೆಸಿದೆ. ಈ ಬಗ್ಗೆ ಅಧಿಕೃತವಾಗಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಟ್ವೀಟ್ ಮಾಡಿದ್ದು ವಿಡಿಯೋ ಸಹಿತ ಪ್ರಧಾನ ವಿರಾಮ ಉಲ್ಲಂಘನೆಯ ಬಗ್ಗೆ ಘೋಷಣೆ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕದನ ವಿರಾಮದ ಮಧ್ಯಸ್ಥಿಕೆಯ ಮಾತಿಗೆ ಪಾಕಿಸ್ತಾನವು ಕಿಂಚಿತ್ತೂ ಮರ್ಯಾದೆ ಕೊಡಲಿಲ್ಲ. ಕದನ ವಿರಾಮದ ಘೋಷಣೆಯನ್ನು ಮೂರು ಗಂಟೆಯೂ ಉಳಿಸಿಕೊಳ್ಳಲಾಗದ ಪಾಕಿಸ್ತಾನ ಅದೆಂತಹ ಕ್ರೂರ ಮನಸ್ಥಿತಿಯ ದೇಶವಾಗಿರಬಹುದು? ಈ ಹೇಯ ಕೃತ್ಯಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರವನ್ನು ನೀಡಲೇಬೇಕಿದೆ.
ಜಮ್ಮು ಕಾಶ್ಮೀರದಾದ್ಯಂತ ಸ್ಪೋಟದ ಸದ್ದು ಕೇಳಿಸುತ್ತಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆಯು ತೀವ್ರವಾಗಿ ಪ್ರತಿ ದಾಳಿ ನಡೆಸುತ್ತಿದೆ.
0 Comments