ಹೌದು ಸೈಬರ್ ವಂಚಕರು ಇತ್ತೀಚಿನ ದಿನಗಳಲ್ಲಿ ತನ್ನ ಹೆಸರುಗಳಲ್ಲಿ ನಕಲಿ ಆಪ್ ಗಳನ್ನು ಸೃಷ್ಟಿಸಿಕೊಂಡು ಜನರಿಂದ ಹಣವನ್ನು ದೋಚುತಿದ್ದಾರೆ. ಕೃತಕ ಬುದ್ಧಿಮತ್ತೆಯ ಮಿಮಿಕ್ರಿ, ಒಎಲ್ಎಕ್ಸ್, ಬ್ಯಾಂಕ್ ವಹಿವಾಟಿನ ಓಟಿಪಿ, ಡಿಜಿಟಲ್ ಅರೆಸ್ಟ್, ಕೊರಿಯರ್ ಹೆಸರಿನಲ್ಲಿ ವಂಚನೆ, ಮಾದಕ ವಸ್ತುಗಳ ಹೆಸರಿನಲ್ಲಿ ಬ್ಲಾಕ್ಮೇಲ್, ಈ ರೀತಿಯ ಮಾರ್ಗಗಳಲ್ಲಿ ಹಣದೋಚುತ್ತಿದ್ದ ಸೈಬರ್ ವಂಚಕರು ಈಗ ಫುಡ್ ಡೆಲಿವರಿ ಆಫ್ ಮೂಲಕ ಹೊಸ ವಂಚನೆ ಜಾಲವನ್ನು ಸೃಷ್ಟಿಸಿಕೊಂಡಿದ್ದಾರೆ. ಇದೇನು ಹೊಸ ವಂಚನಾ ಮಾರ್ಗವಲ್ಲ. ಆದರೆ ಪೊಲೀಸರ ಪ್ರಕಾರ ಪ್ರಸ್ತುತ ನಡೆಯುತ್ತಿರುವ ಸೈಬರ್ ವಂಚನೆಗಳು ಇದಾಗಿದೆ.
ಕೆಲವು ಸಂದರ್ಭಗಳಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳೆಯರು ಮನೆಗೆ ಬರುವುದು ತಡವಾಗುತ್ತದೆ ಎಂದಾಗ ರಾತ್ರಿಯ ಅಡುಗೆಗೆ ಬೇಕಾಗುವ ಸಾಮಗ್ರಿಗಳನ್ನು ಆನ್ಲೈನ್ ಆಪ್ ಮೂಲಕ ಆರ್ಡರ್ ಮಾಡುತ್ತಾರೆ. ಡೆಲಿವರಿ ಹುಡುಗರು ಕೆಲವೊಂದು ವಸ್ತುಗಳನ್ನು ಅಷ್ಟೇ ಮನೆಗೆ ತಲುಪಿಸಿ ಹೋಗಿರುತ್ತಾರೆ. ಆರ್ಡರ್ ಮಾಡಿದ್ದರಲ್ಲಿ ಯಾವುದಾದರೂ ವಸ್ತು ಕೈಗೆ ಸಿಗದೇ ಇದ್ದಾಗ ಗೂಗಲ್ ಮೂಲಕ ಗ್ರಾಹಕರ ಸೇವಾ ಕೇಂದ್ರಕ್ಕೆ ದೂರು ನೀಡುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿ ಎಂಬ ಹೆಸರಿನಲ್ಲಿ ಮಾತನಾಡುವ ವ್ಯಕ್ತಿಯು ಈ ಸಮಸ್ಯೆಗೆ ಪರಿಹಾರಾರ್ಥವಾಗಿ ಯಾವುದಾದರೂ ಆಪ್ ಡೌನ್ಲೋಡ್ ಮಾಡಿ ಕೆಲವೊಂದು ಹಂತಗಳನ್ನು ಆಪ್ ಮೂಲಕ ಪೂರೈಸುವಂತೆ ನಿರ್ದೇಶನ ನೀಡುತ್ತಾರೆ. ಅದೇ ರೀತಿ ಈ ಮಹಿಳೆಯ ಮಾಡಿದ್ದೆ ಆದಲ್ಲಿ ಕೆಲವೇ ಕ್ಷಣಗಳಲ್ಲಿ ಆಕೆಯ ಏಕೌಂಟಲ್ಲಿ ಇರುವ ಹಣ ಖಾಲಿಯಾಗಿ ಮೊಬೈಲಿಗೆ ಸಂದೇಶ ಬಂದಿರುತ್ತದೆ. ಇದು ಸೈಬರ್ ವಂಚಕರು ಮಾಡುತ್ತಿರುವ ಮಹಾ ಮೋಸದಾಟವಾಗಿದೆ.
ಸಮಯದ ಅಭಾವ ಎಷ್ಟೇ ಇದ್ದರೂ ಸಿಕ್ಕ ಸಿಕ್ಕ ಆಪ್ ಮೂಲಕ ಆಹಾರ ಪದಾರ್ಥಗಳನ್ನು ಅಥವಾ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಲೇಬಾರದು. ಅಥವಾ ಆರ್ಡರ್ ಮಾಡಿದ್ದೇ ಆದಲ್ಲಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗಳು ಯಾವುದೇ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಹೇಳಿದ್ದೆ ಆದಲ್ಲಿ ಆ ಆಪ್ಗಳನ್ನು ಡೌನ್ಲೋಡ್ ಮಾಡಬಾರದು. ಪ್ರಸ್ತುತ ದಿನಗಳಲ್ಲಿ ಯಾವುದೇ ಆಪ್ ಅಥವಾ ಲಿಂಕುಗಳನ್ನು ನಾವು ಬಳಸಿದ್ದೇ ಆದಲ್ಲಿ ನಾವು ಮೋಸ ಹೋಗುವುದು ಖಚಿತ. ಈ ರೀತಿ ಅನೇಕ ಮಹಿಳೆಯರು ಮೋಸ ಹೋಗುತ್ತಿದ್ದು, ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪೊಲೀಸರು ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನಸಾಮಾನ್ಯರು ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತರಾಗಿರುವುದು ಬಹು ಮುಖ್ಯ.
ಕರ್ನಾಟಕದಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಪ್ರಕರಣಗಳನ್ನು ತಡೆಗಟ್ಟಲು ಸೈಬರ್ ಅಪರಾಧ ತಡೆಕೇಂದ್ರವನ್ನು ಅಸ್ತಿತ್ವಕ್ಕೆ ತರಲಾಗಿದೆ. ದೇಶದಲ್ಲೇ ಮೊದಲ ಸೈಬರ್ ತನಿಖಾ ಘಟಕ ಇದಾಗಿದೆ. ಸೈಬರ್ ಭದ್ರತೆ, ಸೈಬರ್ ಅಪರಾಧ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್ಲೈನ್ ಅಪರಾಧಗಳು, ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳು, ಡೀಪ್ ಫೇಕ್ ಸಂಬಂಧಿಸಿದಂತೆ ದಾಖಲಾಗುವ ಪ್ರಕರಣಗಳ ಕುರಿತು ಈ ಘಟಕವು ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
0 Comments