ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಕಾಮಗಾರಿ ನಡೆಯುತ್ತಿದ್ದು, ಈ ಕಾರಣದಿಂದ ಜನವರಿ ಒಂದರಿಂದ ಎಪ್ರಿಲ್ 30ರ ತನಕ ಜೋಗದ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಪ್ರವೇಶ ಬಂದ್ ಮಾಡಲಾಗಿತ್ತು. ಜೋಗದಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಗೋಪುರ, ಪಾರ್ಕಿಂಗ್, ಪ್ರವೇಶ ದ್ವಾರ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಜೋಗ ಜಲಪಾತ ವೀಕ್ಷಿಸಿಸಲು ಪ್ರವೇಶ ಶುಲ್ಕ ವ್ಯಕ್ತಿಗೆ 20 ರೂಪಾಯಿ ಇದರ ಜೊತೆಗೆ ಪಾರ್ಕಿಂಗ್ ದರವನ್ನು ಏರಿಸಲಾಗಿದೆ. ಜಲಪಾತವನ್ನು ಪ್ರವಾಸಿಗರು 2 ಗಂಟೆಗಳ ಕಾಲ ಮಾತ್ರ ವೀಕ್ಷಿಸಿ ಹಿಂದಿರುಗಬೇಕು. ಈ ಹಿಂದೆ ಗಂಟೆಗಟ್ಟಲೆ ಜಲಪಾತವನ್ನು ವೀಕ್ಷಿಸುವ ಅವಕಾಶವಿತ್ತು. ಆದರೆ ಈಗ ಎರಡು ಗಂಟೆಗೆ ಮಾತ್ರ ಈ ಅವಕಾಶವನ್ನು ಸೀಮಿತಗೊಳಿಸಲಾಗಿದೆ.
0 Comments