ಇಎಸ್ಐಸಿ ಯಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನದ ಮೂಲಕ ಆಯ್ಕೆ

ಕಾರ್ಮಿಕ ಮತ್ತು ರಾಜ್ಯ ವಿಮಾನ ನಿಗಮ (ಇಎಸ್ಐಸಿ) ಬೆಂಗಳೂರು ವಿವಿಧ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. 
ಡರ್ಮಟಾಲಜಿ, ಜನರಲ್ ಮೆಡಿಸಿನ್, ಒಬಿಜಿ, ರೇಡಿಯೋ ಡಯಗ್ನಾಸಿಸ್,ಪಾಥಾಲಜಿ, ಸೈಕಿಯಾಟ್ರಿ ಸೇರಿ ಒಟ್ಟು 17 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಎಂಡಿ, ಎಂಎಸ್, ಡಿ.ಎನ್.ಬಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 2025 ಮಾರ್ಚ್ 13ರ ಹೊತ್ತಿಗೆ ಅಭ್ಯರ್ಥಿಗಳ ವಯೋಮಿತಿ 67 ವರ್ಷ ಮೀರಿರಬಾರದು. ಮಾರ್ಚ್ 13ರಂದು ನೇರ ಸಂದರ್ಶನ ನಡೆಯಲಿದ್ದು ಆಸಕ್ತರು ಭಾಗವಹಿಸಬಹುದಾಗಿದೆ. 

ಸಂದರ್ಶನ ನಡೆಯುವ ಸ್ಥಳ :New Academic Block, ESIC MC&PGIMSR, Rajajinagar, Bengalore 

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080 22147815 ಅನ್ನು ಸಂಪರ್ಕಿಸಬಹುದಾಗಿದೆ

Post a Comment

0 Comments