ಬ್ಯಾಂಕ್ ಆಫ್ ಬರೋಡದಲ್ಲಿ ಅಪ್ರಂಟೀಸ್ಶಿಪ್ ಗಾಗಿ ಅರ್ಜಿ ಆಹ್ವಾನ

ದೇಶದ ಶ್ರೇಷ್ಠ ಬ್ಯಾಂಕ್ ಕರ್ನಾಟಕದ ವಿಜಯ ಬ್ಯಾಂಕ್ ವಿಲೀನಗೊಂಡಿರುವ ಬ್ಯಾಂಕ್ ಆಫ್ ಬರೋಡ ಪದವೀಧರರಿಗೆ ಒಂದು ವರ್ಷದ ಅಪ್ರಂಟೀಸ್ ಶಿಪ್ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 4000 ಸ್ಥಾನಗಳಿಗೆ ಆಯ್ಕೆ ನಡೆಯಲಿದ್ದು, ಕರ್ನಾಟಕದಲ್ಲಿ ಕನ್ನಡ ಭಾಷಿಗರಿಗಾಗಿ ಒಟ್ಟು 537 ಸ್ಥಾನಗಳಿಗೆ ಅವಕಾಶ ನೀಡಿದೆ.
ಅಪ್ರಂಟೀಸ್ ಶಿಪ್ಗಾಗಿ ಅರ್ಜಿ ಸಲ್ಲಿಸಲು ಮಾರ್ಚ್ 11 ಕೊನೆಯ ದಿನಾಂಕವಾಗಿದೆ. ಒಂದು ವರ್ಷದ ಈ ತರಬೇತಿಗೆ ಮಹಾನಗರ/ನಗರ ಪ್ರದೇಶಗಳ ಅಭ್ಯರ್ಥಿಗಳಿಗೆ ಮಾಸಿಕ 15 ಸಾವಿರ ರೂಪಾಯಿ ಹಾಗೂ ಗ್ರಾಮೀಣ/ಅರೆ ಗ್ರಾಮೀಣ ಅಭ್ಯರ್ಥಿಗಳಿಗೆ 12000 ರೂ ಸ್ಟೈಫಂಡ್ ನೀಡಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ಹಾಗೂ ಗರಿಷ್ಠ 28 ವರ್ಷವಾಗಿರಬೇಕು. ವಿವಿಧ ಮೀಸಲಾತಿ ಅನ್ವಯ ಮೂರರಿಂದ 15 ವರ್ಷದವರೆಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಈ ತರಬೇತಿಗೆ ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ತರಬೇತಿ ಅವಧಿಯು 12 ತಿಂಗಳುಗಳು ಆಗಿರುತ್ತದೆ.ಅರ್ಜಿ ಸಲ್ಲಿಸಲಿಚ್ಛಿಸುವವರಿಗೆ ಅರ್ಜಿ ಶುಲ್ಕವಿದ್ದು, ಅಂಗವಿಕಲರಿಗೆ 400 ರೂ, ಪರಿಶಿಷ್ಟರಿಗೆ 600 ರೂ ಹಾಗೂ ಉಳಿದ ವರ್ಗದವರಿಗೆ 800 ರೂ ನಿಗದಿ ಪಡಿಸಿದೆ. ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಇರಲಿದ್ದು, ನೂರು ಅಂಕಗಳ 100 ಪ್ರಶ್ನೆಗಳಿಗೆ 60 ನಿಮಿಷದಲ್ಲಿ ಉತ್ತರಿಸಬೇಕಾಗಿರುತ್ತದೆ. ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ. ಕರ್ನಾಟಕದಲ್ಲಿ ಪರೀಕ್ಷೆ ಬರೆಯಲು ಕನ್ನಡ ಭಾಷಾ ಪ್ರಾವಿನ್ಯತೆ ಹೊಂದಿರಬೇಕು 10 ಅಥವಾ 12ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದವರು ಭಾಷಾ ಪರೀಕ್ಷೆಯಿಂದ ವಿನಾಯಿತಿ ಪಡೆಯಬಹುದಾಗಿದೆ.

ನಿಗದಿತ ಅರ್ಹತಾ ಅಂಕ, ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಅಂತಿಮವಾಗಿ ಆಯ್ಕೆಪಟ್ಟಿಗೆ ಪರಿಗಣಿಸಲಾಗುತ್ತದೆ ಎಂದು ಬಿಒಬಿ ತಿಳಿಸಿದೆ. ರಾಜ್ಯವಾರು ಹೆಚ್ಚುವರಿ ಪಟ್ಟಿಯನ್ನು ಕಾದಿಡಲಾಗುತ್ತದೆ.

ಅಭ್ಯರ್ಥಿಗಳು ಒಂದೇ ರಾಜ್ಯದ ಅವಕಾಶಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಆಧಾರ್ ಕಾರ್ಡಿನಲ್ಲಿ ನೀಡಲಾಗಿರುವ ವಿಳಾಸದ ಜಿಲ್ಲೆಯನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು. ಹಾಗೆಯೇ ಅಭ್ಯರ್ಥಿಯು ಈಗಾಗಲೇ ಈ ತರಬೇತಿಯನ್ನು ಪಡೆದಿರಬಾರದು, ಪಡೆಯುತ್ತಿರಬಾರದು ಹಾಗೂ ಈ ಹಿಂದೆ  ತರಬೇತಿಯನ್ನು ಪಡೆದುಕೊಂಡಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಪ್ರೆಂಟೀಸ್ ಶಿಪ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಗುರುತಿನ ಚೀಟಿ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ದಾಖಲಾತಿಗಳನ್ನು ಕಲರ್ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. 

ಕರ್ನಾಟಕದಲ್ಲಿ ಜಿಲ್ಲಾವಾರು ಸ್ಥಾನಗಳಿದ್ದು ಬಾಗಲಕೋಟೆ 12, ಬೆಂಗಳೂರು ಗ್ರಾ. 16, ಬೆಂಗಳೂರು ನಗರ 160, ಬೆಳಗಾವಿ 16, ಬಳ್ಳಾರಿ 5, ವಿಜಯಪುರ 8, ಚಾಮರಾಜನಗರ 6, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 16, ಚಿತ್ರದುರ್ಗ 10, ದಕ್ಷಿಣ ಕನ್ನಡ 40, ದಾವಣಗೆರೆ 6, ಧಾರವಾಡ 20, ಗದಗ 6, ಕಲಬುರ್ಗಿ 10, ಹಾಸನ 20, ಹಾವೇರಿ 9, ಕೊಡಗು 16, ಕೋಲಾರ 11, ಮಂಡ್ಯ 39, ಮೈಸೂರು 20, ರಾಯಚೂರು 5, ರಾಮನಗರ 7, ಶಿವಮೊಗ್ಗ 10, ತುಮಕೂರು 12, ಉಡುಪಿ 30 ಸ್ಥಾನಗಳಿವೆ.

ಈ ತರಬೇತಿಯ ಅಧಿ ಸೂಚನೆಗಾಗಿ https://bit.ly/4knnYCC ಪರಿಶೀಲಿಸಬಹುದು. 
ನೋಂದಣಿಗಾಗಿ https://bit.ly/43kZcx6 ಭೇಟಿ ನೀಡಬಹುದು.

Post a Comment

0 Comments