ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಪ್ರಶಸ್ತಿಯು ನಮ್ಮ ಇಡೀ ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರಯಾಣಿಕರ ನಿರೀಕ್ಷೆಗಳನ್ನು ಪೂರೈಸಲು ನಮ್ಮ ಸೇವೆಗಳನ್ನು ನಿತ್ಯವೂ ಸುಧಾರಿಸುತ್ತಲೇ ಇರುತ್ತೇವೆ. ಇನ್ನು ಮುಂದೆಯೂ ಮುಂದುವರಿಸುತ್ತೇವೆ ಎಂದು ಮಂಗಳೂರು ವಿಮಾನ ನಿಲ್ದಾಣದ ವಕ್ತಾರರ ತಿಳಿಸಿದ್ದಾರೆ.
ಚೀನಾದ ಗುವಾಂಗ್ ಝೌನಲ್ಲಿ ಸೆಪ್ಟೆಂಬರ್ 8 ರಿಂದ 21ರವರೆಗೆ ನಡೆಯಲಿರುವ ಎಸಿಐ ವಿಶ್ವ ವಿಮಾನ ನಿಲ್ದಾಣ ಅನುಭವ ಶೃಂಗ ಸಭೆಯಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೂ ನಡೆಯಲಿದೆ.
0 Comments