ನರೇಂದ್ರ ಮೋದಿಯವರಿಗೆ ಬಾರ್ಬಡೋಸ್ ಪ್ರಶಸ್ತಿ

ಕೊರೋನಾ ಸಮಯದಲ್ಲಿ ತೋರಿಸಿದ ನಾಯಕತ್ವ ಮತ್ತು ಅಮೂಲ್ಯವಾದ ಸಹಾಯವನ್ನು ಗುರುತಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾರ್ಬಡೋಸ್ ದೇಶದ ಪ್ರತಿಷ್ಠಿತ ಪ್ರಶಸ್ತಿ "ಆನರರಿ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್" ನೀಡಲಾಗಿದೆ.
ಕೋವಿಡ್ ಸಮಯದಲ್ಲಿ ನರೇಂದ್ರ ಮೋದಿಯವರು ಭಾರತವನ್ನು ಮುನ್ನಡೆಸಿದ ಶ್ರೇಷ್ಠ ನಾಯಕತ್ವ ನೀತಿಗೆ ಸಂದ ಬಹುದೊಡ್ಡ ಗೌರವ ಇದಾಗಿದೆ. ಬಾರ್ಬಡೋಸ್ ನ ಬ್ರಿಡ್ಜ್ ಟೌನ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

Post a Comment

0 Comments