ಇಂದಿನಿಂದಲೇ ರಾಜ್ಯದ 66 ಟೋಲ್ಗಳಲ್ಲಿ ಪರಿಷ್ಕೃತ ಟೋಲ್ ದರ ಜಾರಿ!!

ಇಂದಿನಿಂದ ರಾಜ್ಯದಲ್ಲಿ ದರ ಏರಿಕೆಯ ಅಬ್ಬರ ಜನಸಾಮಾನ್ಯರ ಮೇಲೆ ಬಡಿದಪ್ಪಳಿಸಲಿದೆ. ಏಕೆಂದರೆ ರಾಜ್ಯ ಸರ್ಕಾರವು ಈಗಾಗಲೇ ಮೆಟ್ರೋ, ಹಾಲು, ಮೊಸರು, ವಿದ್ಯುತ್ ಸೇರಿದಂತೆ ಹಲವು ವಸ್ತುಗಳ ಹಾಗೂ ಸೇವೆಗಳು ದೂರುಗಳನ್ನು ಹೆಚ್ಚಳ ಮಾಡಿದೆ. ಇದರ ಜೊತೆಯಲ್ಲಿ ಟೋಲ್ ದರಗಳಲ್ಲಿ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಕೂಡ ರಾಜ್ಯದ ಜನತೆಗೆ ಬೆಲೆ ಏರಿಕೆ ಬರೆ ಎಳೆದಿದೆ.
ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಸುಮಾರು 66 ಟೋಲ್ ಪ್ಲಾಜಗಳಲ್ಲಿ ಇಂದಿನಿಂದ ಹೆಚ್ಚಳವಾಗಿ ಪರಿಷ್ಕೃತ ದರ ಜಾರಿಗೆ ಬರಲಿದೆ. ವಾರ್ಷಿಕ ಹಣ ದುಬ್ಬರ ಹಾಗೂ ಬೆಲೆ ಏರಿಕೆ ಆದರಿಸಿ ಈ ಟೂಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಈ ಟೋಲ್ ದರವು ಟೋಲ್ ಗುತ್ತಿಗೆ ಅವಧಿಯನ್ನು ಆಧರಿಸಿ ದರ ಹೆಚ್ಚಳವಾಗಲಿದೆ. ಟೋಲ್ ದರವು ಕನಿಷ್ಠ ಶೇಕಡ ಮೂರರಷ್ಟು ಮತ್ತು ಗರಿಷ್ಠ ಶೇಕಡ ಐದರಷ್ಟು ಹೆಚ್ಚಳವಾಗಲಿದೆ. ಇದರಲ್ಲಿನ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. 


ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ಸಗಟು ಬೆಲೆ ಸೂಚ್ಯಂಕ ಆಧಾರದಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚುವರಿ ಟೋಲ್ ಶುಲ್ಕವನ್ನು ವಾಹನ ಮಾಲೀಕರಿಗೆ ವರ್ಗಾಯಿಸಲಾಗುತ್ತದೆ. ವಾಹನ ಮಾಲೀಕರು ಈ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಾರೆ. ಈ ಟೋಲ್ ದರ ಹೆಚ್ಚಳದ ಭಾರ ಗ್ರಾಹಕರ ಮೇಲೆ ಬೀಳಲಿದೆ.


Post a Comment

0 Comments