ಬಾಹ್ಯಾಕಾಶ ನಿಲ್ದಾಣ ತಲುಪಿರುವ 'ಕ್ರ್ಯೂ-10' ಸಿಬ್ಬಂದಿ; ಮಾ.19ರಂದು ಸುನಿತಾ & ವಿಲ್ಮೋರ್ ಭೂಮಿಗೆ ಮರಳುವ ಸಾಧ್ಯತೆ!!

ಕಳೆದ 9 ತಿಂಗಳುಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡಿರುವ ಕ್ರೂನೈನ್ ಮಿಷನ್ ಸಿಬ್ಬಂದಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೊರ್ ಅವರನ್ನು ವಾಪಸ್ಸು ಕರೆತರಲು ನಾಸಾದ ಕ್ರ್ಯೂ-10 ಮಿಷನ್ ನ ನಾಲ್ವರು ಗಗನ ಯಾತ್ರಿಗಳು ಆದಿತ್ಯವಾರ ಬೆಳಿಗ್ಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿದ್ದಾರೆ. ಈ ಮೂಲಕ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ಹಾದಿಯನ್ನು ಸುಗಮಗೊಳಿಸಿದ್ದಾರೆ.
ನಾಸಾ ಸಂಸ್ಥೆಯು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ನೆರವಿನಿಂದ ನಾಸಾ ಸಂಸ್ಥೆ ಕ್ರ್ಯೂ-10 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವರಾಲ್ ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಸಂಜೆ ಫಾಲ್ಕನ್ 9 ರಾಕೆಟ್ ಆಗಸದತ್ತ ಚಿಮ್ಮಿತು. ಆನಂತರ ನಾಸಾ ಕ್ರ್ಯೂ10 ಮಿಷನ್ ಉಡಾವಣೆ ಯಶಸ್ವಿಯಾಗಿದೆ ಎಂದು ಘೋಷಿಸಿದೆ. ಈ ಮೂಲಕ ನಾಲ್ವರು ಗಗನಯಾನಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣಿಸಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿ ನಾಲ್ವರು ಗಗನಯಾನಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಕುಣಿದು ಕುಪ್ಪಳಿಸಿರುವ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಮಾರ್ಚ್ 19 20 ನೇ ತಾರೀಕಿಗೆ ಭೂಮಿಗೆ ಮರಳಿ ಬರಲಿದ್ದಾರೆ ಎಂದು ನಾಸಾ ತಿಳಿಸಿದೆ.

Post a Comment

0 Comments