ಭೂ ಸ್ವಾಧೀನ ಪ್ರಕ್ರಿಯೆ ಆಧುನೀಕರಣ; ನಕ್ಷಾ ಪೈಲಟ್ ಯೋಜನೆ ಜಾರಿ


26 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 152 ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯ ಭೂ-ಪ್ರಾದೇಶಿಕ ಜ್ಞಾನ ಆಧಾರಿತ ಭೂ ಸಮೀಕ್ಷೆ ಟೈಲರ್ ಯೋಜನೆಯನ್ನು ಕೇಂದ್ರ ಗ್ರಾಮೀಣ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು ಉದ್ಘಾಟಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಭೂ ಸಂಪನ್ಮೂಲ ಇಲಾಖೆಯ ನೇತೃತ್ವದ ನಕ್ಷಾ ಯೋಜನೆಯು ಭೂ ಸಮೀಕ್ಷೆ ಪ್ರಕ್ರಿಯೆಯನ್ನು ಆಧುನಿಕರಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದೆ.
ಭೂ ದಾಖಲೆಗಳ ರಚನೆ ಮತ್ತು ನವೀಕರಣ, ಭೂಮಾಲಿಕತ್ವದ ನಿಖರವಾದ ದಾಖಲಾತಿಯನ್ನು ಒದಗಿಸುವುದು, ನಗರ ಯೋಜನೆಯನ್ನು ಸುಧಾರಿಸುವುದು ಮತ್ತು ಭೂ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಪಾರದರ್ಶಕತೆ, ದಕ್ಷತೆಯನ್ನು ಹೆಚ್ಚಿಸಲು ಮತ್ತು ಸುಸ್ಥಿರವಾದ ಅಭಿವೃದ್ಧಿಯನ್ನು ಬೆಂಬಲಿಸಲು ಈ ಕಾರ್ಯಕ್ರಮವು ಆಸ್ತಿ ದಾಖಲೆ ಆಡಳಿತಕ್ಕಾಗಿ ಐಟಿ ಸುಧಾರಿತ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತದೆ.

ನಕ್ಷಾ ಪೈಲಟ್ ಯೋಜನೆ ಎಂದರೇನು? 
ನಕ್ಷಾ ಯೋಜನೆ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿಯಲ್ಲಿರುವ ಭೂ ಸಂಪನ್ಮೂಲ ಇಲಾಖೆಯಿಂದ ಜಿಯೋಸ್ಪೇಶಿಯಲ್ ತಂತ್ರಜ್ಞಾನದ ಮೂಲಕ ನಗರ ಭೂ ದಾಖಲೆಗಳನ್ನು ಆಧುನಿಕರಣ ಗೊಳಿಸಲು ಮಾಡಿರುವ ಒಂದು ಉಪಕ್ರಮವಾಗಿದೆ. ಭೂ ಮಾಲೀಕತ್ವದ ನಿಖರವಾದ ದಾಖಲಾತಿಯನ್ನು ರಚಿಸಲು ಮತ್ತು ನವೀಕರಿಸಲು, ಭೂ ವಿವಾದಗಳನ್ನು ಪರಿಹರಿಸಲು, ಆಸ್ತಿ ದಾಖಲೆಗಳನ್ನು ಸುಗಮಗೊಳಿಸಲು ಮತ್ತು ನಗರ ಯೋಜನೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆ 194 ಕೋಟಿ ರೂಪಾಯಿ ಅಂದಾಜು ವೆಚ್ಚದೊಂದಿಗೆ ಕೇಂದ್ರದಿಂದ ಸಂಪೂರ್ಣವಾಗಿ ಹಣವನ್ನು ಪಡೆಯುತ್ತದೆ. ನಗರ ಭೂ ವಿವಾದಗಳು ಮತ್ತು ಅಸ್ಪಷ್ಟ ಆಸ್ತಿ ದಾಖಲೆಗಳು ಭಾರತದಲ್ಲಿ ಬಹಳ ಹಿಂದಿನಿಂದಲೂ ಒಂದು ಬಹುದೊಡ್ಡ ಸವಾಲಾಗಿದೆ. ನಕ್ಷಾ ಯೋಜನೆಯು ಮಾಲೀಕತ್ವ ಮತ್ತು ಆಸ್ತಿ ಹಕ್ಕುಗಳ ಬಗ್ಗೆ ಸ್ಪಷ್ಟನೆಯನ್ನು ಒದಗಿಸುವುದು, ಭೂ ಸಂಬಂಧಿತ ಸಂಘರ್ಷಗಳನ್ನು ಕಡಿಮೆ ಮಾಡುವುದು, ನಗರ ನಿವಾಸಿಗಳಿಗೆ ಜೀವನ ಸುಲಭತೆಯನ್ನು ಸುಧಾರಿಸುವುದು, ಭೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ನಿಖರವಾದ ಭೂ ನಕ್ಷೆಯ ಮೂಲಕ ಸುಸ್ತಿರ ನಗರ ಅಭಿವೃದ್ಧಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಸಮಾಜದಲ್ಲಿ ತಲೆದೋರಿರುವ ಲಕ್ಷಾಂತರ ಆರ್ಥಿವಿವಾದಗಳಿಗೆ ತೆರೆ ಬೀಳಲಿದೆ.

Post a Comment

0 Comments