ಆಧಾರ್ ಕಾರ್ಡ್ ಅಪ್‌ಡೇಟ್‌ಗಾಗಿ ಮತ್ತೆ ದಿನಾಂಕ ಮುಂದೂಡಿಕೆಯಾಗಿದ್ದು, ಜೂನ್ 14 2025ರ ವರೆಗೆ ನಿಮಗೆ ಅವಕಾಶವಿರುತ್ತದೆ. ಈ ಹಿಂದೆ ಡಿಸೆಂಬರ್ 14ರವರೆಗೆ ಉಚಿತ ಆಧಾರ್ ಅಪ್‌ಡೇಟ್ ಸೌಲಭ್ಯಕ್ಕಾಗಿ ದಿನಾಂಕವನ್ನ ನಿಗಧಿಪಡಿಸಲಾಗಿತ್ತು.
ಆಧಾರ್ ಅಪ್‌ಡೇಟ್ ಮಾಡುವುದು ಹೇಗೆ ?
1. UIDAIನ ಅಧಿಕೃತ ವೆಬ್‌ಸೈಟ್‌ನಲ್ಲಿ ಆಧಾರ್ ಸ್ವ-ಸೇವಾ ಪೋರ್ಟಲ್‌ಗೆ ಭೇಟಿ ನೀಡಿ.
2. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಮತ್ತು OTP ಬಳಸಿ ಲಾಗ್ ಇನ್ ಮಾಡಿ.
3. ನಂತರ ಡಾಕ್ಯುಮೆಂಟ್ ಅಪ್‌ಡೇಟ್ ವಿಭಾಗಕ್ಕೆ ಭೇಟಿ ನೀಡಿ ಮತ್ತು ಈಗಾಗಲೇ ನಿಮ್ಮ ಬಳಿ ಇರುವ ವಿವರಗಳನ್ನು ಪರಿಶೀಲಿಸಿ.
4. ಡ್ರಾಪ್-ಡೌನ್ ಪಟ್ಟಿಯಿಂದ ಸೂಕ್ತವಾದ ಡಾಕ್ಯುಮೆಂಟ್ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಪರಿಶೀಲಿಸಿ.
5. ಸೇವಾ ವಿನಂತಿಯ ಸಂಖ್ಯೆಯನ್ನು ನಮೂದಿಸಿ. ಇದು ನಿಮ್ಮ ಆಧಾರ್ ನವೀಕರಣ ವಿನಂತಿಯ ಪ್ರಕ್ರಿಯೆಯ ಹಂತವನ್ನು ಟ್ರ್ಯಾಕ್ ಮಾಡಲು ಇದು ಸಹಾಯ ಮಾಡುತ್ತದೆ.

0 Comments