ಆಧಾರಿತ ಹಾಜರಾತ್ರಿಯನ್ನು ಗುರುತಿಸುವ ಹೊಸ ವ್ಯವಸ್ಥೆ ನಿರಂತರ ಎಂಬ ಯೋಚನೆಯನ್ನು 2025 26ನೇ ಆಯವ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಬೆನ್ನಲ್ಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ನೂತನ ವ್ಯವಸ್ಥೆ ಜಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಎಐ ಆಧಾರಿತ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬಗ್ಗೆ ಈಗಾಗಲೇ ಆಪ್ ರೂಪಿಸಲು ಟೆಂಡರ್ ಅನ್ನೂ ಕರೆಯಲಾಗಿದೆ. ಇಲಾಖೆಯ ಅಧಿಕಾರಿಗಳ ಪ್ರಕಾರ 2025ರ ಜೂನ್ ವೇಳೆಗೆ ಸಿದ್ದಗೊಳ್ಳಲಿದ್ದು, ಈ ವರ್ಷವೇ ಯೋಜನೆ ಜಾರಿಯಾಗಲಿದೆ.
50 ವಿದ್ಯಾರ್ಥಿಗಳಿರುವ ತರಗತಿಯ ಹಾಜರಾತಿಯ ಚಿತ್ರಣವನ್ನು ಶಿಕ್ಷಕರು ಕೇವಲ ಕೆಲವೇ ಸೆಕೆಂಡ್ಗಳಲ್ಲಿ ಸೆರೆ ಹಿಡಿಯಬಹುದಾಗಿದೆ. ವಿದ್ಯಾರ್ಥಿಗಳ ಮುಖ ಪೂರ್ತಿಯನ್ನು ಸರಿ ಹಿಡಿಯುವುದರ ಬದಲು ಕಣ್ಣು ಮತ್ತು ಮೂಗಿನಂತಹ ಮುಖದ ಚಿತ್ರಗಳನ್ನು ಸೆರೆ ಹಿಡಿಯುವ ಮೂಲಕ ಮಕ್ಕಳ ಹಾಜರಾತಿಯನ್ನು ದೃಢೀಕರಿಸುತ್ತದೆ ಎನ್ನುತ್ತಾರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತ ಡಾಕ್ಟರ್ ಕೆವಿ ತ್ರಿಲೋಕ ಚಂದ್ರ.
ಒಮ್ಮೆ ಆಪ್ ಸಿದ್ದಗೊಂಡರೆ ಎಲ್ಲಾ ಶಿಕ್ಷಕರಿಗೆ ಅದನ್ನು ಅವರವರ ಮೊಬೈಲ್ಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಲು ಸುತ್ತೋಲೆ ಹೊರಡಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸ್ಮಾರ್ಟ್ ಫೋನ್ ಇದ್ದರೆ ಸಾಕು. ಬೇರೆ ಯಾವುದೇ ಹೊಸ ಸಾಧನದ ಅಗತ್ಯವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಜೂನ್ ತಿಂಗಳಲ್ಲಿ ಆರಂಭವಾಗುವ ಹೊಸ ಶೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಜಾರಿಗೆ ಬರಲಿದೆ.
0 Comments